ಮಾಜೀ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನ
ಕರ್ನಾಟಕದ ಮಾಜೀ ಮುಖ್ಯಮಂತ್ರಿ ಹಾಗೂ ಭಾರತದ ವಿದೇಶಾಂಗ ಸಚಿವರಾಗಿದ್ದ ಸೋಮನಹಳ್ಳಿ ಮಲ್ಲಪ್ಪ ಕೃಷ್ಣ ಅವರು ಮುಂಜಾವ ಎರಡೂವರೆ ಗಂಟೆಗೆ ಬೆಂಗಳೂರು ಸದಾಶಿವನಗರದ ಸ್ವಗೃಹದಲ್ಲಿ ನಿಧನರಾದರು.
ಕೃಷ್ಣರ ತಂದೆ ಸೋಮನಹಳ್ಳಿ ಮಲ್ಲಪ್ಪನವರು ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಶಾಸನ ಸಭೆಯ ಸದಸ್ಯರಿದ್ದರು. ವಿದೇಶದಲ್ಲಿ ಶಿಕ್ಷಣ ಮುಗಿಸಿದ ಕೃಷ್ಣ ಅವರು ದೇಶಕ್ಕೆ ಹಿಂತಿರುಗಿ ಮದ್ದೂರು ವಿಧಾನ ಸಭಾ ಕ್ಷೇತ್ರದಿಂದ ಮೊದಲು ಗೆದ್ದುದು ಪ್ರಜಾ ಸಮಾಜವಾದಿ ಪಕ್ಷದಿಂದ. ಮುಂದೆ ಕಾಂಗ್ರೆಸ್ ಸೇರಿ ದೀರ್ಘ ಕಾಲ ಆ ಪಕ್ಷದಲ್ಲಿ ಮಂತ್ರಿ, ಉಪ ಮುಖ್ಯಮಂತ್ರಿ, ವಿಧಾನಸಭೆ ಸಭಾಪತಿ, ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಅಷ್ಟೇ ಅಲ್ಲ ಕೆಲಕಾಲ ರಾಜ್ಯಪಾಲರೂ ಆಗಿದ್ದರು.
ಯಾವುದೋ ಇಕ್ಕಟ್ಟಿನಲ್ಲಿ ಕೊನೆಯಲ್ಲಿ ಬಿಜೆಪಿ ಸೇರಿ ಏನೂ ಅಲ್ಲ ಎಂಬಂತಾಗಿದ್ದರು. 93ರ ಪ್ರಾಯದ ಅವರು ಕಳೆದ ಆರು ತಿಂಗಳುಗಳಿಂದ ಶ್ವಾಸಕೋಶ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದರು. 2023ರಲ್ಲಿ ಪದ್ಮವಿಭೂಷಣ ಭಾಜನರಾಗಿದ್ದರು.