ಉಡುಪಿ ಕೊಡವೂರು ವಾರ್ಡ್ : ಉಚಿತ ನೇತ್ರ ತಪಾಸಣೆ
ಉಡುಪಿ ಜಿಲ್ಲೆಯ ಕೊಡವೂರು ವಾರ್ಡಿನಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ ಇವರ ಸಹಯೋಗದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ನೇತ್ರ ತಪಾಸಣಾ ಶಿಬಿರ ಮೇ 26, 2023 ರಂದು ನಡೆಯಿತು. ಶಿಬಿರದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಒಟ್ಟು 26 ಜನರು ಕಣ್ಣಿನ ಪರೀಕ್ಷೆಯನ್ನು ನಡೆಸಿ, 13 ಜನರಿಗೆ ಶಸ್ತ್ರ ಚಿಕಿತ್ಸೆ ಹಾಗೂ 7 ಜನರಿಗೆ ಕನ್ನಡಕ ವಿತರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಮಾತನಾಡಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ ವತಿಯಿಂದ ಉಚಿತವಾಗಿ ನೇತ್ರ ತಪಾಸಣಾ ಶಿಬಿರವನ್ನು ಕೊಡವೂರು ವಾರ್ಡಿನ ಲಕ್ಷ್ಮೀ ನಗರ ಪರಿಸರದಲ್ಲಿ ಆಯೋಜಿಸಲಾಗಿದೆ, ಸರಕಾರದ ಪ್ರತಿಯೊಂದು ಯೋಜನೆಯು ಉಚಿತವಾಗಿ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸಬೇಕು ಇಂತಹ ಚಿಕ್ಕ ಚಿಕ್ಕ ಶಿಬಿರದ ಮೂಲಕ ಕೇಂದ್ರ ರಾಜ್ಯ ಸರ್ಕಾರದ ಎಲ್ಲಾ ಸವಲತ್ತುಗಳು ಮನೆ ಮನೆಗೆ ತಲುಪಿಸಲು ಸಾಧ್ಯವಿದೆ. ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ಸವಲತ್ತುಗಳನ್ನು ಕೊಡವೂರಿನ ಕಾರ್ಯಕರ್ತರ ಸಹಾಯದಿಂದ ಎಲ್ಲಾ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದ ಪ್ರಮುಖರಾದ ಡಾ. ಸುಪ್ರೀತಾ, ಡಾ. ಸ್ಮಿತಿ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ, ಪ್ರೈಮರಿ ಆರೋಗ್ಯ ಕಾರ್ಯಕರ್ತೆ ಸವಿತಾ ಡಿ. ಹಾಜರಿದ್ದರು. ಹಿಮ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.