ಜು.26ರಂದು ಉಡುಪಿ ಮಿಷನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಉಡುಪಿ: ಉಡುಪಿ ಸಿ.ಎಸ್.ಐ ಲೋಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಆಶ್ರಯದಲ್ಲಿ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಉಡುಪಿ ಗಿರಿಜ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್, ಜಯಂಟ್ಸ್ ಬ್ರಹ್ಮಾವರ, ಉಡುಪಿ ವೈದ್ಯಕೀಯ ಪ್ರತಿನಿಧಿಗಳ ಸಂಘ, ಅಜ್ಜರಕಾಡು ಪ್ರಧಾನ ಮಂತ್ರಿ ಜನೌಷದ ಕೇಂದ್ರಗಳ ಸಹಯೋಗದೊಂದಿಗೆ ಹಿರಿಯ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಿಷನ್ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಜು.26ರಂದು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00ಗಂಟೆ ವರೆಗೆ ಆಯೋಜಿಸಲಾಗಿದೆ.

ಶಿಬಿರದಲ್ಲಿ ಸ್ತ್ರೀ ರೋಗ, ನೇತ್ರ, ಕೀಲು ಮತ್ತು ಎಲುಬು, ದಂತ, ಸಾಮಾನ್ಯ ಆರೋಗ್ಯ, ಹಾಗೂ ಮಧುಮೇಹ ತಪಾಸಣಾ ಶಿಬಿರ ಉಚಿತವಾಗಿ ನಡೆಯಲಿದ್ದು ಮಿಷನ್ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ದೀಪಾ ವೈ ರಾವ್, ಡಾ.ಪವಿತ್ರ, ಡಾ.ಅಕ್ಷತಾ ರಾವ್, ಪ್ರಸೂತಿ ತಜ್ಞರು ಡಾ.ಆರ್ಥರ್ ರೋಡ್ರಿಗಸ್, ನೇತ್ರ ಡಾ.ಅರ್ಜುನ್ ಬಳ್ಳಾಲ್, ಕೀಲು ಮತ್ತು ಎಲುಬು ಡಾ.ಧನುಂಜಯ್ ಭಟ್, ಡಾ.ಗಣೇಶ್ ಕಾಮತ್ ಸಾಮಾನ್ಯ ಆರೋಗ್ಯ ತಜ್ಞರು ಡಾ.ನಾಗೇಶ್ ನಾಯಕ್, ಡಾ. ಸಾರಿಕಾ, ದಂತ ತಜ್ಞರು ಭಾಗವಹಿಸಲಿರುವರು ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

add - BDG

Related Posts

Leave a Reply

Your email address will not be published.