ನಾಡಿನೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ: ಕಾಪು ಕಡಲ ಕಿನಾರೆಯಲ್ಲಿ ಮರಳು ಶಿಲ್ಪದಿಂದ ಅರಳಿದ ಗಣಪ

ಗಣೇಶ ಚತುರ್ಥಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಉಡುಪಿಯ ಮರುಳ ಶಿಲ್ಪ ಕಲಾವಿದರು ಕಾಪು ಕಡಲ ಕಿನಾರೆಯಲ್ಲಿ ವಿಭಿನ್ನವಾಗಿ ಗಣಪತಿಯನ್ನು ಚಿತ್ರಿಸಿದ್ದಾರೆ.

ಸ್ಯಾಂಡ್ ಥೀಂ ನ ಮೂರು ಜನ ಕಲಾವಿದರಾದ ಹರೀಶ್ ಸಾಗ, ಸಂತೋಷ್ ಭಟ್ ಹಾಲಾಡಿ, ಉಜ್ವಲ್  ಈ ಗಣಪತಿಯ ಬೃಹತ್ ಮರಳು ಶಿಲ್ಪವನ್ನು ರಚಿಸಿದ್ದಾರೆ. ಕಾಪು ಕಡಲ ಕಿನಾರೆಗೆ ಬಂದ ಪ್ರವಾಸಿಗರನ್ನು ಈ ಕಲಾಕೃತಿ ಸೆಳೆದಿದೆ.

ಗಜಾನನ ಹೆಸರಿನ ಮರಳು ಶಿಲ್ಪ, ಪ್ಲಾಸ್ಟಿಕ್- ಪರಿಸರಕ್ಕೆ ಮಾರಕವಾದ ಬಣ್ಣಗಳ ರಹಿತವಾಗಿ ಹಬ್ಬವನ್ನು ಆಚರಿಸೋಣ ಎಂಬ ಸಂದೇಶವನ್ನು ಸಾರಿದೆ.

Related Posts

Leave a Reply

Your email address will not be published.