ಡಿ.24 -25 ರಂದು ಗಟ್ಟಿ ಸಮಾಜ ಸೇವಾ ಸಂಘದ ಅಮೃತ ಮಹೋತ್ಸವ

ಮಂಗಳೂರು: ಪೆÇಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ (ರಿ.) ಇದರ ಅಮೃತ ಮಹೋತ್ಸವ ಸಮಾರಂಭ ಡಿಸೆಂಬರ್ 24 ಮತ್ತು 25ರಂದು ನಡೆಯಲಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲದ ತೊಕ್ಕೊಟ್ಟು ಅಂಬಿಕಾರೋಡ್ ಜಂಕ್ಷನ್‍ನಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ಮಾತೃಸಂಘ, ಅಮೃತ ಮಹೋತ್ಸವ ಸಮಿತಿ, ಒಂಭತ್ತು ಮಾಗಣೆ ಸೀಮೆ ಗುರಿಕಾರರುಗಳ ಸೋಮನಾಥ ಸೇವಾ ಸಮಿತಿ, ಗಟ್ಟಿ ಸಮಾಜದ ಗುರು ಸಮಾನರಾದ ನಾಯ್ಗರ, ಮತ್ತು ಮೇಲ್ಡರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಈ ಬಗ್ಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪೆÇಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ(ರಿ.)ದ ಅಧ್ಯಕ್ಷ ಹಾಗೂ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾದ ದಯಾನಂದ ಗಟ್ಟಿ ಪಿಲಿಕೂರು ಅವರು ಡಿಸೆಂಬರ್ 24ರ ಶನಿವಾರ ಬೆಳಗ್ಗೆ 8.00 ಗಂಟೆಗೆ ಗಟ್ಟಿ ಸಮಾಜ ಭವನದಲ್ಲಿ ಗಣಹೋಮ ನಡೆಯಲಿದ್ದು, ಬೆಳಗ್ಗೆ 9.30 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ ಶ್ರೀ ಹರಿನಾರಾಯಣ ಅಸ್ರಣ್ಣ ದೀಪ ಪ್ರಜ್ವಲಿಸುವ ಮೂಲಕ ಅಮೃತ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ನಾಡೋಜ ಡಾ| ಶ್ರೀ ಜಿ. ಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಗಣ್ಯ ಅತಿಥಿಗಳು, ಸಮಾಜದ ಹಿರಿಯರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಮಾರೋಪ ಸಮಾರಂಭದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಶುಭಾಶಂಸನೆ ಗೈಯ್ಯಲಿರುವರು. ಮಂಗಳೂರು ಲೋಕಸಭಾ ಸಂಸದ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕದ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖಾ ಸಚಿವರು ಶ್ರೀ ಕೋಟಾ ಶ್ರೀನಿವಾಸ ಪೂಜಾರಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ವಿಧಾನಸಭಾ ಪ್ರತಿಪಕ್ಷದ ಉಪನಾಯಕ ಶ್ರೀ ಯು.ಟಿ.ಖಾದರ್ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ಶ್ರೀ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಶ್ರೀ ಪ್ರತಾಪ್‍ಸಿಂಹ ನಾಯಕ್, ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಬಿ. ರಮಾನಾಥ ರೈ, ಶ್ರೀ ಅಭಯಚಂದ್ರ ಜೈನ್ ಸೇರಿದಂತೆ ಗಣ್ಯ ಅತಿಥಿಗಳು ಭಾಗವಹಿಸಲಿದ್ದು, ಮಾತೃಸಂಘದ ಮಾಜಿ ಅಧ್ಯಕ್ಷರುಗಳು ಮತ್ತು ಸಮಾಜದ ಗಣ್ಯರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಪೆÇಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ(ರಿ.) ಇದರ ಅಮೃತ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಡಾ| ರೋಹನ್‍ಚಂದ್ರ ಆರ್. ಗಟ್ಟಿ, ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ಎ. ಉಮೇಶ್ ಗಟ್ಟಿ (ಮೆಸ್ಕಾಂ), ಮಮತಾ ಗಟ್ಟಿ, , ಪೆÇಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ(ರಿ.)ದ ಜೊತೆ ಕಾರ್ಯದರ್ಶಿ ಪದ್ಮನಾಭ ಗಟ್ಟಿ ಬಜಿಲಕೇರಿ, ಕಾರ್ಯಕಾರಿ ಸಮಿತಿ ಸದಸ್ಯ ನಿತಿನ್ ಗಟ್ಟಿ ಲೇಡಿಹಿಲ್ ಪ್ರಚಾರ ಸಮಿತಿಯ ಹರೀಶ್ ಗಟ್ಟಿ ಶರವು ಉಪಸ್ಥಿತರಿದ್ದರು.
