ಗೆಜ್ಜೆಗಿರಿ ಕ್ಷೇತ್ರದಲ್ಲಿ ಪ್ರವೀಣ್ ನೆಟ್ಟಾರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಪುತ್ತೂರು ಗೆಜ್ಜೆ ಗಿರಿಯ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲ ಸ್ಥಾನ ನಂದನ್ ಬಿತ್ತಿಲ್ ನಲ್ಲಿ ಭಾನುವಾರದಂದು ಬೆಳಿಗ್ಗೆ ಬಿಲ್ಲವ ಸಮುದಾಯದ ಯುವ ಉದ್ಯಮಿ ಹಾಗೂ ಗೆಜ್ಜೆಗಿರಿ ನಂದನ್ ಬಿತ್ತಿಲಿನ ಪ್ರಸಾದ ತಯಾರಿಕ ಘಟಕದ ಸಂಚಾಲಕರಾಗಿ ಕಳೆದೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಪ್ರವೀಣ್ ನೆಟ್ಟಾರು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತುಈ ಸಂದರ್ಭದಲ್ಲಿ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ ಪ್ರವೀಣ ರವರ ಕೆಲಸ-ಕಾರ್ಯಗಳ ಬಗ್ಗೆ ಗುಣಗಾನ ಮಾಡಿದರು ಹಾಗೂ ಅಧ್ಯಕ್ಷರಾದ ಪಿತಾಂಬರ ಹೇರಾಜೆ ಮಾತನಾಡಿ ಪ್ರವೀಣ್ ಒಬ್ಬ ಉತ್ಯುತ್ತಮ ವ್ಯಕ್ತಿ ಎಂದು ಗುಣಗಾನ ಮಾಡಿದರು ಈ ಸಂದರ್ಭದಲ್ಲಿ ಡಾ. ರಾಜಶೇಖರ್ ಕೋಟ್ಯಾನ್ ಮಾತನಾಡಿ ಬ್ರಹ್ಮ ವಿಷ್ಣು ಮಹೇಶ್ವರ ಪಾದ ಸೇರಿ ಸ್ವರ್ಗ ಸಿಗಲಿ ಎಂದು ಪ್ರಾರ್ಥಿಸಿದರು ಈ ಸಂದರ್ಭದಲ್ಲಿ ಡಾಕ್ಟರ್ ರಾಜಶೇಖರ್ ಕೋಟ್ಯಾನ್ ಗೌರವಾಧ್ಯಕ್ಷರು ಜಯಂತ್ ನಡುಬೈಲು ಗೌರವಾಧ್ಯಕ್ಷರು ಪೀತಾಂಬರ ಹೇರಾಜೆ ಅಧ್ಯಕ್ಷರು ಕೋಟ್ಯಾನ್ ಪ್ರಧಾನ ಕಾರ್ಯದರ್ಶಿ ಕೋಶಾಧಿಕಾರಿ ಚಂದ್ರಹಾಸ ಉಚ್ಚಿಲ್ ಕಾರ್ಯದರ್ಶಿ ಗೋಪಿನಾಥ್ ಬಗಂಬಿಲ ಧನಂಜಯ ಮತ್ತು ಸದಾನಂದ ಪೂಜಾರಿ ಬರಿಮಾರ್ ದೀಪಕ್ ಸಜಿಪ ಪುರುಷೋತ್ತಮ ಕುಪ್ಪೆಪದವು ಶಶಿಧರ್ ಕಿನ್ನಿಮಜಲು ಭಾಸ್ಕರ ಸಾಲಿಯಾನ್ ಮುಂಬೈ ಸೂರ್ಯಕಾಂತ ಸುವರ್ಣ ಮುಂಬೈ ಚಂದ್ರಕಾಂತ ಶಾಂತಿವನ ಮುಂತಾದವರು ಉಪಸ್ಥಿತರಿದ್ದರು.