ಬಹರೈನ್ : ಮೇ 19ರಂದು “ಗಿರಿಜಾ ಕಲ್ಯಾಣ” ಯಕ್ಷಗಾನ ಪ್ರದರ್ಶನ
ಬಹರೈನ್ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘದ ಯಕ್ಷೋಪಾಸನ ಕೇಂದ್ರದ ಹಿರಿಯ ವಿದ್ಯಾರ್ಥಿಗಳಿಂದ “ಗಿರಿಜಾ ಕಲ್ಯಾಣ ” ಎನ್ನುವ ಯಕ್ಷಗಾನ ಪ್ರದರ್ಶನವನ್ನು ನಾಟ್ಯಗುರು ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ ಕನ್ನಡ ಭವನದ ಶ್ರೀಮತಿ ಆಶಾ ಶೆಟ್ಟಿ ಸಭಾಂಗಣದಲ್ಲಿ ಇದೇ ಮೇ ತಿಂಗಳ 19ನೇ ತಾರೀಖಿನ ಶುಕ್ರವಾರದಂದು ಸಂಜೆ 5:30 ಗೆ ಸರಿಯಾಗಿ ಆಯೋಜಿಸಲಾಗಿದೆ
ಬಹರೈನ್ ಕನ್ನಡ ಸಂಘಕ್ಕೂ ಯಕ್ಷಗಾನಕ್ಕೂ ಸುಮಾರು ನಾಲ್ಕು ದಶಕಗಳ ಅವಿನಾಭಾವ ಸಂಭಂದವಿದ್ದು ಪ್ರಪ್ರಥಮವಾಗಿ ಯಕ್ಷಗಾನವನ್ನು ಸೀಮೋಲ್ಲಂಘನ ಮಾಡಿದಂತಹ ಕೀರ್ತಿ ಬಹರೈನ್ ಕನ್ನಡ ಸಂಘಕ್ಕೆ ಸಲ್ಲುತ್ತದೆ . ಇಲ್ಲಿ ಸಂಪೂರ್ಣವಾದಂತಹ ಹಿಮ್ಮೇಳ ಹಾಗು ಮುಮ್ಮೇಳ ಹೊಂದಿರುವಂತಹ ಯಕ್ಷಗಾನ ತಂಡವಿದ್ದು ಯಕ್ಷಗಾನ ಕಲಿಕಾಕೇಂದ್ರ ಕೂಡ ಇದೆ . ಈ ಕಲಿಕಾ ಕೇಂದ್ರದಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಕ್ಷಗಾನವನ್ನು ನಾಟ್ಯಗುರು ಶ್ರೀ ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ ಯಕ್ಷಗಾನ ಅಭ್ಯಾಸ ನಡೆಸುತ್ತಿದ್ದಾರೆ ಇದೀಗ ಈ ಯಕ್ಷಗಾನ ಕೇಂದ್ರದ ಹಿರಿಯ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನವೊಂದಕ್ಕೆ ತಯಾರಾಗಿದ್ದು , ಈ ಸಂದರ್ಭದಲ್ಲಿ ನಾಟ್ಯ ಗುರುಗಳಾದ ಶ್ರೀ ದೀಪಕ್ ರಾವ್ ಪೇಜಾವರ ಇವರು v4 ನ್ಯೂಸ್ ನೊಂದಿಗೆ ಈ ಯಕ್ಷಗಾನ ಪ್ರದರ್ಶನದ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ . ಈ ಕಾರ್ಯಕ್ರಮವು v4 ನ್ಯೂಸ್ ನಲ್ಲಿ ನೇರ ಪ್ರಸಾರ ಕಾಣಲಿದ್ದು ಕಾರ್ಯಕ್ರಮಕ್ಕೆ ದ್ವೀಪದ ಎಲ್ಲಾ ಯಕ್ಷಪ್ರೇಮಿಗಳಿಗೆ ಪ್ರವೇಶ ಮುಕ್ತವಾಗಿರುತ್ತದೆ . ಇದೆ ಕಾರ್ಯಕ್ರಮದಲ್ಲಿ ಯಕ್ಷರಂಗಕ್ಕೆ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡು ಇದೀಗ ದ್ವೀಪ ರಾಷ್ಟವನ್ನು ಶಾಶ್ವತವಾಗಿ ತೊರೆದು ತಾಯ್ನಾಡಿಗೆ ತೆರಳುತ್ತಿರುವ ಗಣೇಶ್ ಎಡನೀರ್ ರವರನ್ನು ಸಮ್ಮಾನಿಸಿ ಬೀಳ್ಕೊಡಲಾಗುವುದು .
ಈ ಯಕ್ಷಗಾನದ . ಹಿಮ್ಮೇಳದಲ್ಲಿ ಭಾಗವತರಾಗಿ ರೋಶನ್ ಎಸ್.ಕೋಟ್ಯಾನ್,ಚೆಂಡೆ -ಮದ್ದಳೆ : ಧನಂಜಯ ಕಿನ್ನಿಗೋಳಿ, ಗಣೇಶ್ ಕಟೀಲು, ಅಕ್ಷಿತ್ ಸುವರ್ಣ ,*ಚಕ್ರತಾಳದಲ್ಲಿ : ಅಭಿಷೇಕ್ ಕಲ್ಲಡ್ಕ ಸಹಕರಿಸಲಿದ್ದು ,ಮುಮ್ಮೇಳದಲ್ಲಿ *ದೇವೇಂದ್ರನಾಗಿ ಕುಮಾರಿ ಪ್ರಜ್ಞಾ ಜಗದೀಶ್,ಅಗ್ನಿಯಾಗಿ – ಪೂರ್ವಜಾ ಜಗದೀಶ್,ವಾಯು – ರಿಯಾ ಹೇಮಂತ್ ,ವರುಣ – ಪ್ರಾರ್ಥನಾ ಗಣೇಶ್ ,ಕುಬೇರ – ಮಹಸ್ವಿನ್ ರಾವ್ ಪೇಜಾವರ ,ತಾರಕಾಸುರ – ಪುಷ್ಪರಾಜ್ ಶೆಟ್ಟಿ’ಶಂಬರಾಸುರ – ಹೇಮಂತ್ ಸಾಲ್ಯಾನ್ ‘ಶಂಖಾಸುರ – ಸಂತೋಷ್ ಅಚಾರ್ಯ ‘ಬ್ರಹ್ಮ – ಝಾನ್ಸಿ ಶೇಖರ್ ಬಳ್ಳಾರಿ,ವಿಷ್ಣು – ಧನ್ವಿ ರಾಮ್ ಪ್ರಸಾದ್ ;ಮನ್ಮಥ – ನಮಿತಾ ಸಾಲ್ಯಾನ್ ,ರತಿ – ತೀರ್ಥಾ ಗಣೇಶ್,ಈಶ್ವರ – ಆಶಾ ಅಜಿತ್ ,ಗಿರಿಜೆ – ರೇಷ್ಮಾ ಗೋಪಾಲ್ ಶೆಟ್ಟಿ,ಬೈರಾಗಿ – ಹೇಮಂತ್ ಸಾಲ್ಯಾನ್ ಷಣ್ಮುಖ – ಪ್ರಕೃತಿ ಗೋಪಾಲ್ ಶೆಟ್ಟಿಯವರು ಪ್ರದರ್ಶನ ನೀಡಲಿದ್ದಾರೆ . ಈ ಯಕ್ಷಗಾನದ ಸಂಯೋಜಕರಾಗಿ ಶ್ರೀ ರಾಮ್ ಪ್ರಸಾದ್ ಅಮ್ಮೆನಡ್ಕ ರವರು ಕಾರ್ಯ ನಿರ್ವಹಿಸುತ್ತಿದ್ದಾರೆ . ಈ ಯಕ್ಷಗಾನ ಪ್ರದರ್ಶನದ ಹೆಚ್ಚಿನ ಮಾಹಿತಿಗಾಗಿ ರಾಮ್ ಪ್ರಸಾದ್ ಅಮ್ಮೆನಡ್ಕ ರವರನ್ನು ದೂರವಾಣಿ ಸಂಖ್ಯೆ 33946655 ಮೂಲಕ ಸಂಪರ್ಕಿಸಬಹುದು.