ವಿಟ್ಲ: ಜೋಕಾಲಿಗೆ ಕುತ್ತಿಗೆ ಸಿಲುಕಿ ಬಾಲಕಿ ಸಾವು
![](http://v4news.com/wp-content/uploads/2024/12/vittla-.jpg)
ವಿಟ್ಲ: ಆಟವಾಡುತ್ತಿದ್ದ ವೇಳೆ ಜೋಕಾಲಿಗೆ ಕುತ್ತಿಗೆ ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಇದೊಂದು ಆತ್ಮಹತ್ಯೆ ಎಂದು ತಿಳಿದು ಬಂದಿದೆ ಈ ಬಗ್ಗೆ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶೇರಾ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ಮಡಲ ನಿವಾಸಿ ಕಿಶೋರ್ ರವರ ಪುತ್ರಿ ತೀರ್ಥಶ್ರೀ (8) ಮೃತಪಟ್ಟ ಬಾಲಕಿ.
ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ವಿಟ್ಲ ಪೊಲೀಸರು ಬಾಲಕಿಯ ಪೋಷಕರಲ್ಲಿ ಮತ್ತು ಸ್ನೇಹಿತರಲ್ಲಿ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸುತ್ತಿದ್ದಾರೆ.
![](http://v4news.com/wp-content/uploads/2024/11/add-OBG-819x1024.jpg)