ಬೋಂದೆಲ್ ; ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು – ಪ್ರವೇಶಾತಿ ಆರಂಭ
ಮಂಗಳೂರಿನ ಬೋಂದೆಲ್‍ನಲ್ಲಿರುವ ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ 2023-24ನೇ ಪ್ರವೇಶಾತಿ ಆರಂಭಗೊಂಡಿದೆ.
ಕಾಲೇಜಿನಲ್ಲಿ ಇಂಜಿನಿಯರಿಂಗ್ ಕೋರ್ಸ್‍ಗಳು, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ನಾನ್ ಇಂಜಿನಿಯರಿಂಗ್, ಕಮರ್ಶಿಯಲ್ ಪ್ರಾಕ್ಟೀಸ್, ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಬೋಧನೆಯನ್ನು ಮಾಡುತ್ತಿದ್ದಾರೆ.
ಸ್ಟೆನೋಗ್ರಫಿ, ಗ್ರಾಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ, ಸುಸಜ್ಜಿತ ಕಟ್ಟಡ ಮತ್ತು ಪ್ರಯೋಗಾಲಯ, ಗ್ರಂಥಾಲಯ ಸಹಿತ ಸ್ಮಾರ್ಟ್ ಕ್ಲಾಸ್‍ಗಳು, ಅನುಭವಿ ಉಪನ್ಯಾಸಕರು, ನುರಿತ ಶಿಕ್ಷಕರು, ವಿಶಾಲ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ, ವಿದ್ಯಾರ್ಥಿನಿಯರಿಗೆ ಆವರಣದಲ್ಲಿ ಹಾಸ್ಟೆಲ್, ಪ್ರೀಶಿಪ್ ಮತ್ತು ವಿದ್ಯಾರ್ಥಿ ವೇತನ ಸೌಲಭ್ಯಗಳು, ಉಚಿತ ಬಸ್ ಪಾಸ್, ವಿಕಲಾಂಗ ಚೇತನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ, ಸ್ಕಾಲರ್‍ಶಿಪ್ ಮತ್ತು ಪುಸ್ತಕಗಳು ಲಭ್ಯವಿದೆ.
ತರಗತಿಗೆ ಪ್ರವೇಶ ಶುಲ್ಕ 1420 ರೂಪಾಯಿ ಮಾತ್ರ. ಸರ್ಕಾರದ ವತಿಯಿಂದ ಭೋಧನಾ ಶುಲ್ಕ ಸಂಪೂರ್ಣ ವಿನಾಯಿತಿಯಿದೆ. ಹೆಚ್ಚಿನ ಮಾಹಿತಿಗಾಗಿ ಬೋಂದೆಲ್ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 0824 2482334, ಮೊಬೈಲ್ ಸಂಖ್ಯೆ 9448869332, 9844744845 gmail Id [email protected]