ರಾಜ್ಯದಲ್ಲಿ ನಾಳೆಯಿಂದ ಸರ್ಕಾರಿ ಸೇವೆ ಬಂದ್

ಬೆಂಗಳೂರು : 7ನೇ ವೇತನ ಆಯೋಗ ಜಾರಿಗೆ ನಾಳೆಯಿಂದ ಹಮ್ಮಿಕೊಂಡಿರುವ ಮುಷ್ಕರ ಹಿನ್ನೆಲೆ ರಾಜ್ಯದಲ್ಲಿ ಎಲ್ಲ ಸರ್ಕಾರಿ ಸೇವೆ ಬಂದ್‌ ಆಗಲಿವೆ ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿ ನಾಳೆ ಯಾವ ಇಲಾಖೆ ನೌಕರರೂ ಕೆಲಸಕ್ಕೆ ಹಾಜರಾಗುವುದಿಲ್ಲ. ಯಾವುದೇ ಸಂಧಾನಕ್ಕೆ ಮಣಿಯುವುದಿಲ್ಲ; ಏನೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧ. ಆಯೋಗ ವರದಿ ಜಾರಿಯಾದರೆ ಮಾತ್ರ ಮುಷ್ಕರ ಹಿಂದಕ್ಕೆ ಪಡೆಯಲಾಗುವುದು. ಒಂದುವೇಳೆ ಎಸ್ಮಾ ಜಾರಿಗೊಳಿಸಿದರೂ ಹೆದರುವುದಿಲ್ಲ ಎಂದಿದ್ದಾರೆ.

ಈ ಮುಷ್ಕರದಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುವ ಸಾಧ್ಯತೆ ಇದೆ. ಆಸ್ಪತ್ರೆ ಸೇರಿದಂತೆ ತುರ್ತು ಸೇವೆ ಪಡೆಯುವವರಿದ್ದರೆ ಅದಕ್ಕೆ ಇಂದೇ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ನಾಳೆ ಸರ್ಕಾರಿ ಆಸ್ಪತ್ರೆಗಳ ಯಾವುದೇ ಓಪಿಡಿ ಇರುವುದಿಲ್ಲ. ಕೇವಲ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿರುತ್ತದೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ್‌ ದೊರೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ೩ ಪ್ರಮುಖ ಆಸ್ಪತ್ರೆ, ೧೦೫ ಪಿಎಸ್‌ಸಿ ಸೆಂಟರ್‌, ೧೯ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಗಪತ್ರೆಗ್‌ಖಳ ಓಪಿಡಿ ಬಂದ್‌ ಆಗುವುದಾಗಿ ಹೇಳಿದ್ದಾರೆ.

Related Posts

Leave a Reply

Your email address will not be published.