ಕಡಬ ಸೈಂಟ್ ಆನ್ಸ್ ಕಿಂಡರ್ ಗಾರ್ಡನ್ ಶಾಲೆಯಲ್ಲಿ ಪದವಿ ಪ್ರದಾನ ಸಮಾರಂಭ

ಕಡಬ :ಇಲ್ಲಿನ ಸೈಂಟ್ ಆನ್ಸ್ ಕಿಂಡರ್ ಗಾರ್ಡನ್ ಶಾಲೆಯಲ್ಲಿ ಯು ಕೆ ಜಿ ಪುಟಾಣಿಗಳ ಪದವಿ ಪ್ರಧಾನ ಸಮಾರಂಭವು ಬಹಳ ವಿಜೃಂಭಣೆಯಿಂದ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸೈಂಟ್ ತೋಮಸ್ ವಸತಿ ಶಾಲೆ ಬೈಂದೂರು ಇಲ್ಲಿನ ಪ್ರಾಂಶುರಾದ ವಂದನೀಯ ಫಿಲಿಪ್ ನೆಲ್ಲಿವಿಲಾ ಅವರು ಪುಟಾಣಿಗಳು ತಮ್ಮ ಶಿಕ್ಷಣದ ಪ್ರಾಥಮಿಕ ಹಂತವನ್ನು ಪೂರೈಸಿ ಹೊಸ ಪ್ರವಾಸಕ್ಕೆ ಕಾಲಿಡುವ ಈ ಕ್ಷಣದಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ.ಹೆತ್ತವರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಛಲ, ಧೈರ್ಯ, ಆತ್ಮವಿಶ್ವಾಸದಂತಹ ಮೌಲ್ಯಗಳನ್ನು ಬೆಳೆಸಿಕೊಟ್ಟರೆ ವಿದ್ಯಾರ್ಥಿಗಳೇ ತಮ್ಮ ತಮ್ಮ ಗುರಿಯನ್ನು ಆಯ್ಕೆ ಮಾಡಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಚಾಲಕರಾದ ವಂದನೀಯ ಪ್ರಕಾಶ್ ಪೌಲ್ ಡಿಸೋಜ ಪುಟಾಣಿಗಳಿಗೆ ಶುಭಾಶಯ ತಿಳಿಸಿದರು. ಪೋಷಕರಿಗೆ ಮಕ್ಕಳ ಒಳ್ಳೆಯ ಬೆಳವಣಿಗೆಯ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದರು.
ತರಗತಿ ಶಿಕ್ಷಕಿಯಾದ ಶ್ರೀಮತಿ ಸಾರಾ ಎಲ್ ಡಿಸೋಜ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಮಕ್ಕಳ ಮುಂದಿನ ಜೀವನವು ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.ವಿದ್ಯಾರ್ಥಿಗಳಾದ ಅರ್ಘ್ಯನ್ ಆರಿಗ ಮತ್ತು ಹಸೀನಾ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮುಖ್ಯ ಹಂತವಾಗಿ ಯು.ಕೆ.ಜಿ ಪುಟಾಣಿಗಳಿಗೆ ಅಧಿಕೃತವಾಗಿ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. ಬಳಿಕ ಎಲ್ ಕೆ ಜಿ ಮತ್ತು ಯು ಕೆ ಜಿ ಪುಟಾಣಿಗಳಿಂದ ಸಾಂಸ್ತ್ರಿತಿಕ ಕಾರ್ಯಕ್ರಮ ಜರುಗಿದವು.
ಈ ಸಂಧರ್ಭದಲ್ಲಿ ಸೈಂಟ್ ಜೋಕಿಮ್ ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಜೇಸಿಂತ, ಸೈಂಟ್ ಆನ್ಸ್ ಶಾಲೆಯ ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷ ಗಿರಿಧರ್ ರೈ, ಸೈಂಟ್ ಜೋಕಿಮ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸಿ. ಹಿಲ್ದಾ ರೋಡ್ರಿಗಸ್, ಸೈಂಟ್ ಆನ್ಸ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ದಕ್ಷಾ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಸೈಂಟ್ ಆನ್ಸ್ ಶಾಲೆಯ ಪ್ರಾಂಶುಪಾಲರಾದ ವಂದನೀಯ ಅಮಿತ್ ಪ್ರಕಾಶ್ ರೋಡ್ರಿಗಸ್ ಸ್ವಾಗತಿಸಿ, ಸಹ ಶಿಕ್ಷಕಿ ಸೌಮ್ಯ ವಂದಿಸಿದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿ ಸುರಕ್ಷಾ ನಿರೂಪಿಸಿದರು.