ಗುಜ್ಜಾಡಿ : ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ರಾಜ್ಯದಲ್ಲಿ ಸಾರ್ವಂತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿದೆ, ಆದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವ ವಿಷಯದಲ್ಲಿ ಎಡವಟ್ಟು ಮಾಡಿಕೊಂಡಂತಿದೆ, ಕಾಂಗ್ರೆಸ್ ಹಿಂದೂ ಕಾರ್ಯಕರ್ತರು ಇಂತಹ ಪ್ರಣಾಳಿಕೆಯಿಂದ ಬೇಸತ್ತು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು
ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಕಾಂಗ್ರೆಸ್ ಪಕ್ಷದ ಹಲವಾರು ಕಾರ್ಯಕರ್ತರು ಸ್ಥಳೀಯ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಕೇಸರಿ ಬಿಜೆಪಿ ಪಡೆಗೆ ಸೇರ್ಪಡೆಗೊಂಡರು.

ಬೈಂದೂರು ಬಿಜೆಪಿ ಕ್ಷೇತ್ರಧ್ಯಕ್ಷ ದೀಪಕ್ ಶೆಟ್ಟಿ ಪಕ್ಷದ ಧ್ವಜ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು ಸ್ಥಳೀಯ ಬಿಜೆಪಿ ನಾಯಕರದ ವಿನೋದ್ ಭಂಡಾರಿ ಹಾಗೂ ಹರೀಶ್ ಮೇಸ್ತ ಗುಜ್ಜಾಡಿ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಉಮೇಶ್ ಮೇಸ್ತ, ದತ್ತಾತ್ರೇಯ ಖಾರ್ವಿ, ಪುಂಡಲಿಕ ಮಂಕಿ, ಸೋಮನಾಥ್ ಮೇಸ್ತ, ದೇವದಾಸ್ ಖಾರ್ವಿ ಗುಜ್ಜಾಡಿ ಗ್ರಾಮದ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು