ಗುಂಡ್ಲುಪೇಟೆ : ನೀರಿಲ್ಲದ ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಬ್ಬಳ್ಳಿ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ನೀರು ಇಲ್ಲದ ಬಾವಿಯಲ್ಲಿ ಗಂಡು ಜಿಂಕೆಯೊಂದು ಬಿದ್ದಿದ್ದ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಜಿಂಕೆಯನ್ನು ರಕ್ಷಣೆ ಮಾಡಲಾಗಿದೆ.

ಅರಣ್ಯ ಸಂರಕ್ಷಣಾಧಿಕಾರಿ ಬಂಡೀಪುರ ಹುಲಿ ಯೋಜನೆಯ ಡಾ. ರಮೇಶ್ ಕುಮಾರ್ ರವರ ಮಾರ್ಗದರ್ಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರರವರ ನೇತೃತ್ವದಲ್ಲಿ..ವಲಯ ಅರಣ್ಯ ಅಧಿಕಾರಿ ಡಾ. ಲೋಕೇಶ್ ಹಾಗೂ ಪಶು ವೈದ್ಯರಾದ ವಸಿಮ್ ಮತ್ತು ಉಪ ವಲಯ ಅರಣ್ಯ ಆಧಿಕಾರಿ, ಅರಣ್ಯ ರಕ್ಷಕರು ಸಿಬ್ಬಂದಿ ಯವರು ತಕ್ಷಣ ಸ್ಥಳಕ್ಕೆ ಧಾವಿಸಿ 20 ಅಡಿ ಆಳದಲ್ಲಿದ ಜಿಂಕೆಯನ್ನು ಬಲೆ ಸಹಾಯದಿಂದ ಮೇಲೆತ್ತಿ ವೈದ್ಯರು ಚಿಕಿತ್ಸೆ ನೀಡಿ ನಂತರ ಕಾಡಿಗೆ ಬಿಡಲಾಯಿತ್ತು.
