ಗುಂಡ್ಲುಪೇಟೆ : ನಿವೇಶನ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ

ನಿವೇಶನ ಹಂಚಿಕೆ ವಿಚಾರವಾಗಿ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ವಸತಿ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ನಿವೇಶನದ ಹಕ್ಕು ಪತ್ರ ಸಿಗದ ಹಿನ್ನಲೆ ಬೇಸತ್ತ ಕೆಂಪಮ್ಮ ಎಂಬಾಕೆ ಏರು ಧ್ವನಿಯಲ್ಲಿ ಸಚಿವರನ್ನು ಕೇಳಿದ್ದಕ್ಕೆ ಸಚಿವರು ಕಾಪಾಳಮೋಕ್ಷ ಮಾಡಿದ್ದಾರೆ.ಕಪಾಳಕ್ಕೆ ಹೊಡೆಸಿಕೊಂಡರೂ ಸಚಿವರ ಕಾಲಿಗೆ ಬಿದ್ದು, ಮಹಿಳೆ ಸಮಸ್ಯೆ ಹೇಳಿಕೊಂಡಿದ್ದಾರೆ.

ಕಪಾಳಮೋಕ್ಷ ಮಾಡಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.
