ಗುರುರಾಜ್ ಗಂಟಿಹೊಳೆ ಪರ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ನಟ ಪ್ರಮೋದ್ ಶೆಟ್ಟಿ ಬಿರುಸಿನ ಪ್ರಚಾರ
ಬೈಂದೂರು: ಕನ್ನಡ ಚಲನಚಿತ್ರ ಕ್ಷೇತ್ರ ನಟ ಪ್ರಮೋದ್ ಶೆಟ್ಟಿಯವರು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಘಂಟಿಹೊಳೆಯವರ ಪರವಾಗಿ ವಿವಿಧಡೆ ಕಾಲ್ನಡಿಗೆಯಲ್ಲಿ ಸಾಗಿ ಮತಯಾಚಿಸಿದರು.
2008 ರಿಂದ ಗುರುರಾಜ್ ಗಂಟೆ ಹೊಳೆಯವರ ಒಡನಾಡಿಯಾಗಿದ್ದ ಇವರು ಕಷ್ಟದ ದಿನಗಳಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿದ್ದರು ಆ ಕಾರಣದಿಂದ ಅವರಿಬ್ಬರ ಸ್ನೇಹವೂ ಗಟ್ಟಿಯಾಗಿತ್ತು ಯಾವುದೇ ಪಕ್ಷದೊಂದಿಗೂ ಗುರುತಿಸಿಕೊಳ್ಳದ ಪ್ರಮೋಶೆಟ್ಟಿಯವರು ತನ್ನ ಸ್ನೇಹಿತನ ವ್ಯಕ್ತಿತ್ವ ಮೆಚ್ಚಿ ಬೈಂದೂರು ಕ್ಷೇತ್ರದ ವಿವಿಧ ಕಡೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು ಪೇಟೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಅಂಗಡಿ ಹೋಟೆಲ್ ಗಳಿಗೆ ಭೇಟಿ ನೀಡಿ ಗುರುರಾಜ ಗಂಟೆಹೊಳೆ ಅವರಿಗೆ ಮತ ನೀಡುವಂತೆ ಕೋರಿಕೊಂಡರು.
ಪ್ರಮೋದ್ ಶೆಟ್ಟಿ ಅವರು ತಮ್ಮ ಸ್ನೇಹಿತ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರೊಂದಿಗೆ ಪ್ರಚಾರ ನಡೆಸಿದ್ದು ಇನ್ನೊಂದು ವಿಶೇಷ ಶೈನ್ ಶೆಟ್ಟಿ ಅವರು ಕರಾವಳಿ ಭಾಗದಲ್ಲಿ ತನ್ನದೇ ಪ್ರಭಾವ ಹೊಂದಿದ್ದಾರೆ. ಇಬ್ಬರು ಒಟ್ಟಿಗೆ ಗುರುರಾಜ ಗಂಟಿಹೊಳೆ ಅವರ ಪರವಾಗಿಪ್ರಚಾರ ಮಾಡುತ್ತಿರುವುದು ಚುನಾವಣ ಕಣ ಇನ್ನಷ್ಟು ರಂಗೇರಿದೆ.