ಬೈಂದೂರು : ಸದನದಲ್ಲಿ ಕಾರ್ಮಿಕರ ಪರ ಧ್ವನಿ ಎತ್ತಿದ ಶಾಸಕ ಗುರುರಾಜ್ ಗಂಟಿಹೊಳೆ
ಬೈಂದೂರು: ಪ್ರಸ್ತುತ ರಾಜ್ಯದಲ್ಲಿ ಕೆಂಪು ಕಲ್ಲು ಲಭ್ಯತೆ ಇಲ್ಲದೆ ಅಥವಾ ಪೂರಕ ದಾಸ್ತಾನು ಇಲ್ಲದೇ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ತೊಡಕಾಗುತ್ತಿರುವುದು ಸರಕಾರದ ಗಮನದಲ್ಲಿದೆ. ಸಮರ್ಪಕವಾಗಿ ಜನಸಾಮಾನ್ಯರಿಗೆ ಕೆಂಪು ಕಲ್ಲು ಪೂರೈಕೆಗೆ ಸಹಕಾರಿ ಆಗುವಂತೆ ನಿಯಮದಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ.ಉಡುಪಿ ಜಿಲ್ಲೆ ಸಹಿತ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಿಂತಿರುವುದರಿಂದ ಕಾರ್ಮಿಕರಿಗೆ ಹಾಗೂ ಮನೆ, ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೆ ಆಗುತ್ತಿರುವ ತೀವ್ರತೆರನಾದ ಸಮಸ್ಯೆಯ ಬಗ್ಗೆ ಬೆಳಗಾವಿ ಅಧಿವೇಶನನದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಎಂಎಂಸಿ ಕಾಯ್ದೆ 1994ರ ನಿಯಮ 3-A ರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ತೆಗೆಯಲು ಅನುಮತಿಸಿರುವ ಪ್ರಕರಣ 15, ಉಡುಪಿ ಜಿಲ್ಲೆಯಲ್ಲಿ ಅನುಮತಿ ನೀಡಿಲ್ಲ. ರಾಜ್ಯದ 4 ಜಿಲ್ಲೆ ಗಳಾದ ದಕ್ಷಿಣ ಕನ್ನಡ 0, ಉಡುಪಿ ಯಲ್ಲಿ 02, ಶಿವಮೊಗ್ಗ ದಲ್ಲಿ 05, ಹಾಗೂ ಬೀದರ್ ನಲ್ಲಿ 04 ಗಣಿ ಗುತ್ತಿಗೆ ಗಳನ್ನೂ ಹಾಗೂ ಕೆ.ಎಂ.ಎಂ.ಸಿ ಕಾಯ್ದೆ1994 ರ ನಿಯಮ 3-Aರಂತೆ ದಕ್ಷಿಣ ಕನ್ನಡದಲ್ಲಿ 15 ಪ್ರಕರಣಗಳಿಗೆ ಕೆಂಪು ಕಲ್ಲು ತೆಗೆಯಲು ಅನುಮತಿ ನೀಡಿದ್ದರೆ, ಉಡುಪಿ, ಶಿವಮೊಗ್ಗ ಹಾಗೂ ಬೀದರ್ ನಲ್ಲಿ ಅನುಮತಿಸಿರುವ ಪ್ರಕರಣ ಶೂನ್ಯ ಇದೆ ಎಂದಿದ್ದಾರೆ.ಪ್ರಸ್ತುತ ರಾಜ್ಯದಲ್ಲಿ ಕೆಂಪು ಕಲ್ಲು ಲಭ್ಯತೆ ಇಲ್ಲದೆ ಅಥವಾ ಪೂರಕ ದಾಸ್ತಾನು ಇಲ್ಲದೇ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ತೊಡಕಾಗುತ್ತಿರುವುದು ಸರಕಾರದ ಗಮನದಲ್ಲಿದೆ. ಸಮರ್ಪಕವಾಗಿ ಜನಸಾಮಾನ್ಯರಿಗೆ ಕೆಂಪು ಕಲ್ಲು ಪೂರೈಕೆಗೆ ಕೈಗೊಂಡ ಕ್ರಮದ ಬಗ್ಗೆ ಮಾನ್ಯ ಸಚಿವರು ಉತ್ತರಿಸಿ, ಕರ್ನಾಟಕ ಉಪಖನಿಜ ರಿಯಾಯಿತಿ ಕಾಯ್ದೆ 1994ರ ನಿಯಮ 3(A) ಕ್ಕೆ ಅಗತ್ಯ ತಿದ್ದುಪಡಿ ತಂದು ಕಟ್ಟಡ ನಿರ್ಮಾಣ ಉದ್ದೇಶಕ್ಕಾಗಿ ಕೆಂಪು ಕಲ್ಲಿನ ಇಟ್ಟಿಗಳನ್ನು ತೆಗೆಯಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ.