ಹಳೆಯಂಗಡಿ : ಸಮಸ್ಯೆಗಳನ್ನು ಒಂದೇ ಸೂರಿನಡಿ ಪರಿಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮ

ಹಳೆಯಂಗಡಿ: ಗ್ರಾಮದ ಜನತೆಯ ಸಮಸ್ಯೆಗಳನ್ನು ಒಂದೇ ಸೂರಿನಡಿ ಪರಿಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಸಾಕಷ್ಟು ಮಂದಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಪಡೆದುಕೊಳ್ಳಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೊಟ್ಯಾನ್‌ ಹೇಳಿದರು.

ಅವರು ಹಳೆಯಂಗಡಿ ಪಂಚಾಯತ್‌ ವತಿಯಿಂದ ಕೆಮ್ರಾಲ್, ಪಡುಪನಂಬೂರು, ಮತ್ತು ಹಳೆಯಂಗಡಿ ಗ್ರಾಮ ಪಂಚಾಯತ್ ನಲ್ಲಿ ಬರುವ ಎಲ್ಲಾ ಗ್ರಾಮದವರಿಗೆ ವಿದ್ಯಾ ವಿನಾಯಕ ಯುವಕ ಮಂಡಲ ಸಭಾಭವನ ಹಳೆಯಂಗಡಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಯಾಟಿಸಿ ಮಾತನಾಡಿ, ಅವರು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮೂಲ್ಕಿ ಮೂಡಬಿದ್ರೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ತರಲಾಗಿದ್ದು, ಅಷ್ಟೇ ಅಲ್ಲದೆ ಸುಮಾರು ಆರು ಸಾವಿರಕ್ಕಿಂತಲೂ ಕುಟುಂಬಸ್ಥರಿಗೆ ಡಿಮ್ಡ್ ಫಾರೆಸ್ಟ್ ಮತ್ತು ಇತರ ಸಮಸ್ಯೆಗಳಿಂದ ಇದ್ದ ಜಾಗದ ಹಕ್ಕು ಪತ್ರವನ್ನು ಈಗಾಗಲೇ ನೀಡಿದ್ದಾರೆ ಇನ್ನು ಮುಂದಿನ ದಿನಗಳಲ್ಲಿ ವಿತರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪಿಂಚಣಿ ಪ್ರಮಾಣ ಪತ್ರ, ವಿಕಲ ಚೇತನರಿಗೆ ವೀಲ್ ಚೇರ್ ಮತ್ತು ವಿಕಲಚೇತನರ ಪ್ರಮಾಣ ಪತ್ರ, ಕಟ್ಟಡ ಕಾರ್ಮಿಕರಿಗೆ ಕಿಟ್‌ ವಿತರಣೆ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್‌ ಹಲವಾರು ಮಂದಿಗೆ ಏಕ್ವಾಗಾರ್ಡ್ ಮತ್ತು ಸಿಂಟೆಕ್ಸ್ ಟ್ಯಾಂಕಿ ವಿತರಣೆ ನಡೆಯಿತು. ಹಲವು ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಲ್ಕಿ ತಹಶೀಲ್ದಾರ್‌ ಅನಂತ ಶಂಕರ್‌, ಕಾರ್ಯನಿರ್ವಹಣಾಧಿಕಾರಿ ದಯಾವತಿ, ಹಳೆಯಂಗಡಿ ಪಂಚಾಯತ್‌ ಪಿಡಿಒ ಮುತ್ತಪ್ಪ ಪಂಚಾಯತ್ ಅಧ್ಯಕ್ಷರು ಪೂರ್ಣಿಮಾ ಪಡು ಪಣಂಬೂರು ಪಂಚಾಯತ್ ಅಧ್ಯಕ್ಷರು ಮಂಜುಳಾ ಕೆಮ್ರಾಲ್ ಪಂಚಾಯತ್ ಅಧ್ಯಕ್ಷರು ಲೀಲ ಕೃಷ್ಣಪ್ಪ ಪೂಜಾರಿ ಹಳೆಯಂಗಡಿ ಪಂಚಾಯತಿ ಉಪಾಧ್ಯಕ್ಷರು ಅಶೋಕ್ ತಹಶೀಲ್ದಾರ್ ಅನಂತ ಶಂಕರ್ ಕೆಮ್ರಲ್ ಪಿಡಿಒ ಅರುಣ್ ಡಿಸೋಜ ಪಡು ಪಣಂಬೂರು ಪಿಡಿಒ ರಮೇಶ್ ನಾಯಕ್ ಮತ್ತು ಹಲವು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.