ಹಳೆಯಂಗಡಿ: ಸಹಕಾರಿ ಸಂಘದ ಭೀಷ್ಮ ಎಚ್. ನಾರಾಯಣ ಸನಿಲ್ ಸ್ಮರಣಾ ಕಾರ್ಯಕ್ರಮ

ಸಹಕಾರಿ ಭೀಷ್ಮ ನಾರಾಯಣ ಸನಿಲ್ ಅವಧಿಯಲ್ಲಿ ಸಹಕಾರಿ ಕ್ಷೇತ್ರ ಸಾಕಷ್ಟು ಅಭಿವೃಧ್ಧಿಯನ್ನು ಕಂಡಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದವರು ನಮಗೆಲ್ಲ ಆದರ್ಶ ಪ್ರಾಯರು.ಧಾರ್ಮಿಕ ಸಮಾಜಿಕ ಶೈಕ್ಷಣಿಕ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಸಹಕಾರಿ ಭೀಷ್ಮ ನಾರಾಯಣ ಸನಿಲ್ ಅವರು  ಕೈಯಾಡಿಸಿದ್ದಾರೆ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರತ್ನ ಚಿತ್ತರಂಜನ್ ಬೋಳಾರ್ ಹೇಳಿದರು.

ಅವರು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಸಂಘದ ಸಭಾ ಭವನದಲ್ಲಿ ನಡೆದ  ಸಂಘದ ಪ್ರೇರಣಾ ಶಕ್ತಿಯಾದ ಸಹಕಾರಿ ಸಂಘದ ಭೀಷ್ಮ ಎಚ್ ನಾರಾಯಣ ಸನಿಲ್ ಅವರ ಸ್ಮರಣಾ ಕಾರ್ಯಕ್ರಮದಲ್ಲಿ ನಾರಾಯಣ ಸನಿಲ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.

ಈ ಸಂಧರ್ಭ  ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ್ ಬೇರ್ನಾರ್ಡ್ ಅವರು ಮಾತನಾಡಿದರು.

ವೇದಿಕೆಯಲ್ಲಿ  ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ.ಹಳೆಯಂಗಡಿ ನಾರಾಯಣ ಸನಿಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಯಶ್ರೀ.ಗ್ರಾಮ ಪಂಚಾಯತ್ ಮಾಜಿ ಸದಸ್ಯ ನರೇಂದ್ರ ಪ್ರಭು.ಸದಸ್ಯರಾದ ಧನಂಜಯ ಮಟ್ಟು.ಗಣೇಶ್ ಅಮೀನ್ ಸಂಕಮಾರ್.ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.