ಹಳ್ಳಿಗಾಡಿನ ಯುವಕರ ಮನ ಸೆಳೆಯುತ್ತಿದೆ ಹೇ ರನ್ ಜಾಲ್
ಕುಂದಾಪುರ: ಶ್ರೀ ದುರ್ಗಾಪರಮೇಶ್ವರಿ ಮಿತ್ರಮಂಡಳಿ, ಧನುಷ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ರಿಯಾಲಿಟಿ ಟೂರ್ಸ್ ಎಂಡ್ ಟ್ರಾವೆಲ್ಸ್ ಮುಂಬೈ ನ ಸ್ಥಾಪಕ ಕೃಷ್ಣ ಪೂಜಾರಿಯವರು ನಡೆಸಿಕೊಂಡು ಬರುತ್ತಿರುವ ಹಳ್ಳಿಗಾಡಿನ ಯುವಕ ಯುವತಿಯರಿಗಾಗಿ ಹೇ ರನ್ ಜಾಲ್ ಆಯೋಜಿಸಿದ್ದರು
ಕಳೆದ ನಾಲ್ಕು ವರ್ಷಗಳಿಂದ ಪ್ರತೀ ಪೆಬ್ರವರಿ ಅಥವಾ ಮಾರ್ಚ್ ತಿಂಗಳ ಒಂದು ಭಾನುವಾರದಂದು ಇಲ್ಲಿನ ಯುವಕ ಯುವತಿಯರಿಗೆ ಮ್ಯಾರಥಾನ್ ಓಟವನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.ಮಾರ್ಚ್ 5ರ ಭಾನುವಾರ ಬೆಳಿಗ್ಗೆ ನಡೆದ ಈ ವರ್ಷದ ಐದು ಕಿಲೋಮೀಟರ್ ಹಳ್ಳಿಗಾಡಿನ ಓಟ ಹೇ ರನ್ ಜಾಲ್ ನ್ನು ಖಂಬದಕೋಣೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್ ಎನ್ ರಾಯ್ಕರ್ ಉದ್ಘಾಟಿಸಿದರು. ಗ್ರಾಮೀಣ ಭಾಗದಲ್ಲಿ ಯುವಕ ಯುವತಿಯರಿಗೆ ಸ್ವಭಾವತಃ ಕ್ರೀಡೆಗಳಲ್ಲಿ ಪರಿಣತಿ ಇರುತ್ತದೆ. ಆದರೆ ಅದಕ್ಕೆ ಪೂರಕವಾಗಿ ಗ್ರಾಮೀಣ ಭಾಗದಲ್ಲಿ ಕ್ರೀಡಾಸಕ್ತಿ ಬೆಳೆಸುವುದು ಇದರ ಉದ್ದೇಶವಾಗಿದ್ದು, ಜೊತೆಗೆ ರನ್ ಫಾರ್ ಯುನಿಟಿ ರನ್ ಫಾರ್ ಕಮ್ಯುನಿಟಿ ಸ್ಲೋಗನ್ ಮ್ಯಾರಥಾನ್ ಸೊಗಸನ್ನು ಹೆಚ್ಚಿಸಿತು. 500ಮೀಟರ್, 1 ಕಿಲೋ ಮೀಟರ್, 2 ಕಿಲೋ ಮೀಟರ್ ಹಾಗೂ 5 ಕಿಲೋ ಮೀಟರ್ ಮ್ಯಾರಥಾನ್ ನಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಹಾಗೂ ಪದಕ ಮತ್ತು ನಗದು ಬಹುಮಾನವನ್ನೂ ನೀಡಲಾಯಿತು.