ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ ಆಲ್ಬಾಂ ಸಾಂಗ್ ಬಿಡುಗಡೆ
ಶಾಸಕ ಹರೀಶ್ ಪೂಂಜ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಪ್ರಚುರಪಡಿಸುವ ” ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ” ಆಲ್ಬಂ ಸಾಂಗ್ ನ್ನು ಶಾಸಕ ಹರೀಶ್ ಪೂಂಜ ಬಿಡುಗಡೆಗೊಳಿಸಿದರು.
ಎಪಿಕೆ ಕ್ರಿಯೆಶನ್ಸ್ ಬ್ಯಾನರ್ ಅಡಿಯಲ್ಲಿ ಅಜಿತ್ ಪೂಜಾರಿ ಕನ್ಯಾಡಿ ರಾಗಸಂಯೋಜನೆ ಮಾಡಿ ಈ ಹಾಡನ್ನು ಹಾಡಿದ್ದಾರೆ. ನಿಧೀಶ್ ಶೆಟ್ಟಿ ಕನ್ಯಾಡಿ, ನವೀನ್ ಸುವರ್ಣ ಕನ್ಯಾಡಿ, ಅವಿನಾಶ ಶೆಟ್ಟಿ ಕನ್ಯಾಡಿ,ಸಹನ್ ಉಜಿರೆ, ರಾಘವೇಂದ್ರ ಗೌಡ ಕೊಂಕ್ರೋಟ್ಟು, ಅಶೋಕ್ ಬಂಗೇರ ಓಟ್ಲ, ಪವನ್ ಪ್ರಭು ಉಜಿರೆ ಈ ಆಲ್ಬಂ ಸಾಂಗ್ ನ್ನು ನಿರ್ಮಿಸಿದ್ದಾರೆ.
ಆಲ್ಬಂ ಸಾಂಗ್ ಬಿಡುಗಡೆ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಕರುಣಾಕರ ಸುವರ್ಣ ಉಪ್ಪಿನಂಗಡಿ, ಪ್ರಮುಖರಾದ ಸದಾನಂದ ಉಂಗಿಲಬೈಲು, ಸುಧೀರ್ ಸುವರ್ಣ, ಚಂದ್ರರಾಜ್ ಮೇಲಂತಬೆಟ್ಟು ಗಾಯಕ ಅಜಿತ್ ಪೂಜಾರಿ ಕನ್ಯಾಡಿ ಮುಂತಾದವರು ಇದ್ದರು.