ಬೆಳ್ತಂಗಡಿ ತಾಲೂಕು ಕಚೇರಿಗೆ ಶಾಸಕ ಹರೀಶ್ ಪೂಂಜಾ ದಿಢೀರ್ ದಾಳಿ
ಬೆಳ್ತಂಗಡಿ ತಾಲೂಕು ಕಚೇರಿಗೆ ಶಾಸಕ ಹರೀಶ್ ಪೂಂಜಾ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕು ಕಚೇರಿ ಅಧಿಕಾರಿಗಳು ಕಡತ ವಿಲೇವಾರಿ ಮಾಡಲು ಜನರನ್ನು ಸತಾಯಿಸುತ್ತಿದ್ದರು. ಆದ್ದರಿಂದ ಶಾಸಕರು ಕಚೇರಿ ದಿಢೀರ್ ಅಂತಾ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ತಾಲೂಕು ಕಚೇರಿಗೆ ಆಗಮಿಸಿದ ಶಾಸಕ ಹರೀಶ್ ಪೂಂಜಾ, ಜನರ ಸಮಸ್ಯೆ ಆಲಿಸಿದ ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಸೇರಿದಂತೆ ಇತರೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ರೆಕಾರ್ಡ್ ರೂಂಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳ ಸ್ಪಂದನೆ ಬಗ್ಗೆ ಜನರಿಂದ ಮಾಹಿತಿ ಪಡೆದರು.