ಹಾಸನ:  ಭೀಕರ ಅಪಘಾತ: ಒಂದೇ ಕುಟುಂಬದ ಆರು ಮಂದಿ ಮೃತ್ಯು

ಕಾರು – ಕಂಟೇನರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ನಡೆದಿದೆ.

ಹಾಸನ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕಂದಲಿ ಸಮೀಪದ ಇಂದು ಬೆಳಗಿನ ಜಾವ 6:30 ರಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಹಿಳೆಯರು, ಮೂರು ಪುರುಷರು, ಒಂದು ಮಗು ಸೇರಿ 6 ಮಂದಿ ಮೃತರಾಗಿದ್ದಾರೆ.

ಒಂದೇ ಕುಟುಂಬದ ನಾರಾಯಣ ಸ್ವಾಮಿ, ಸುನಂದಾ, ರವಿಕುಮಾರ್, ನೇತ್ರ,ಚೇತನ್ (ಬಾಲಕ), ರಾಕೇಶ್ (ಡ್ರೈವರ್) ಮೃತರು.

ಎಲ್ಲರೂ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ, ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು.

ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ಕಾರಿನಲ್ಲಿ ತೆರಳಿದ್ದ ಕುಟುಂಬ ಸದಸ್ಯರು ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

Related Posts

Leave a Reply

Your email address will not be published.