ಜೈ ಭೀಮ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಶಾಖೆ ಪಡುಬಿದ್ರಿ, ಇದರ ದಶಮಾನೋತ್ಸವ ಅಂಗವಾಗಿ ಮೂರನೇ ವರ್ಷದ ರಾಜ್ಯಮಟ್ಟದ ಜೈ ಭೀಮ್ ಟ್ರೋಫಿ 2023 ಹೆಜಮಾಡಿ ಬಸ್ತಿಪಡ್ಪು ಮೈದಾನದಲ್ಲಿ ಉದ್ಘಾಟನೆಗೊಂಡಿತು.
ಅಂಬೇಡ್ಕರ್ ಬಾವಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ ಜಿಲ್ಲಾ ಶಾಖೆಯ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಉದ್ಘಾಟಿಸಿ ಮಾತನಾಡಿದ ಅವರು, ಅದೇಷ್ಟೋ ಪ್ರತಿಭೆಗಳಿದ್ದರೂ ಅವಕಾಶ ವಂಚಿತವಾಗಿ ಕಮರಿ ಹೋಗುತ್ತಿದೆ. ಆ ನಿಟ್ಟಿನಲ್ಲಿ ಇಂಥಹ ಕ್ರೀಡೆಗಳನ್ನು ಆಯೋಜಿಸುವ ಮೂಲಕ ನಮ್ಮ ಸಮಾಜದ ಯುವಕರಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ತರುವ ಸಣ್ಣ ಪ್ರಯತ್ನವೆಂದರು.

ಮುಖ್ಯ ಅಥಿತಿಯಾಗಿದ್ದ ದಲಿತ ಮುಖಂಡ ಶೇಖರ್ ಹೆಜಮಾಡಿ ಮಾತನಾಡಿ, ಇಂಥಹ ಕ್ರೀಡೆಗಳ ಮೂಲಕ ಸಂಘಟನೆಗಳನ್ನು ಗಟ್ಟಿ ಮಾಡುವುದರೊಂದಿಗೆ ದಲಿತರ ಧ್ವನಿಯಾಗ ಬೇಕಾಗಿದೆ ಎಂದರು. ಅಧ್ಯಕ್ಷತೆಯನ್ನು ಗ್ರಾಮ ಶಾಖೆ ಪಡುಬಿದ್ರಿಯ ಸಂಚಾಲಕ ಸುರೇಶ್ ಪಾದೆಬೆಟ್ಟು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ಪಾಂಡುರಂಗ ಕರ್ಕೇರ, ಪರಮೇಶ್ವರ ಉಪ್ಪೂರು, ವಿಠಲ್ ಉಚ್ಚಿಲ, ರಾಜು ಹೆಜಮಾಡಿ, ರಾಜಶೇಖರ್ ಮಟ್ಟು ಹಾಗೂ ಮಾತೃವಸಂಸ್ಥೆಯ ಮಹಿಳಾ ಸಂಚಾಲಕಿ ವಸಂತಿ ಶಿವಾನಂದ್ ಉಪಸ್ಥಿತರಿದ್ದರು.
