ಹೆಜಮಾಡಿಯಲ್ಲಿ ಟೋಲ್ ಸುಂಕ ಹೆಚ್ಚಳ: ರಾಜಕೀಯ ರಹಿತ ಹೋರಾಟ: ಗುಲಾಂ ಅಹಮ್ಮದ್

ಹಿಂದೆಯೂ ರಾಜಕೀಯ ರಹಿತವಾಗಿ ಹೋರಾಟ ನಡೆಸಿದ ನಮ್ಮ ಹೋರಾಟ ಸಮಿತಿಗೆ ಜಯ ದೊರಕಿದ್ದು, ಇದೀಗ ಮತ್ತೆ ಹೋರಾಟದ ಅನಿವಾರ್ಯತೆ ಬಂದ ಹಿನ್ನಲೆಯಲ್ಲಿ ಮತ್ತೆ ರಾಜಕೀಯ ರಹಿತವಾಗಿ ಹೋರಾಟ ನಡೆಸಲಾಗುವುದು ಎಂಬುದಾಗಿ ಹೆಜಮಾಡಿ ಟೋಲ್ ಹೋರಾಟ ಸಮಿತಿ ಅಧ್ಯಕ್ಷ ಗುಲಾಂ ಅಹಮ್ಮದ್ ಹೇಳಿದ್ದಾರೆ.

ಸುರತ್ಕಲ್ ಟೋಲ್ ತೆರವು ಹಂತದಲ್ಲಿದ್ದು, ಇದೀಗ ಅಲ್ಲಿ ಸಂಗ್ರಹಿಸುತ್ತಿದ್ದ ಸುಂಕವನ್ನು ಹೆಜಮಾಡಿ ಟೋಲ್ ನಲ್ಲಿ ಸಂಗ್ರಹಿಸಲು ಮುಂದಾದ ಹೆದ್ದಾರಿ ಇಲಾಖೆಯ ಪ್ರಯತ್ನ ಯಾವತ್ತೂ ಫಲ ಕಾಣದು, ಹಿಂದೆ ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ಸ್ಥಳೀಯ ಶಾಸಕರು ಮಾಜಿ ಸಚಿವರು, ಸಹಿತ ಎಲ್ಲಾ ಪಕ್ಷಗಳ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರನ್ನು ಸೇರಿಸಿ ನಡೆಸಿದ ಪ್ರತಿಭಟನೆಯ ದೆಸೆಯಿಂದ ಎರಡು ವರ್ಷಗಳ ಕಾಲ ಸುಂಕ ರಹಿತ ಸಂಚಾರ ಉಡುಪಿ ಜಿಲ್ಲಾ ವಾಹನಗಳಿಗಿದ್ದು, ಉದ್ಯೋಗ ಅವಕಾಶವೂ ಲಭಿಸಿತು, ಬಳಿಕ ಬೆಳವಣಿಗೆಯಿಂದಾಗಿ ಸ್ಥಳೀಯ ವಾಹನಗಳಿಗೆ ಉಚಿತ ಪ್ರವೇಶ ಎಂಬಂತ್ತಾಗಿದೆ.  ಮತ್ತೆ ಹೋರಾಟದ ರೂಪುರೇಷೆ ನಡೆಸಲು ಪಕ್ಷಾತೀತವಾಗಿ ಎಲ್ಲರನ್ನೂ ಕರೆದು ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದೆಂದು ಗುಲಾಂ ಅಹಮ್ಮದ್ ಹೇಳಿದ್ದಾರೆ.

Related Posts

Leave a Reply

Your email address will not be published.