ಹೆಜಮಾಡಿ : ಹೆದ್ದಾರಿಯಂಚಿಗೆ ಮೀನಿನ ನೀರು ಚೆಲ್ಲಿದ ವಾಹನ -ಗ್ರಾ.ಪಂ.ನಿಂದ 5 ಸಾವಿರ ದಂಡ
ಹೆಜಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆದ್ದಾರಿ ಇಕ್ಕೆಲಲ್ಲಿ ಭಟ್ಕಳ ಮೂಲದ ಮೀನಿನ ವಾಹನವೊಂದರಿಂದ ದುರ್ನಾತ ಬೀರುವ ಮೀನಿನ ನೀರನ್ನು ಚೆಲ್ಲಿದ ತಪ್ಪಿಗೆ ಹೆಜಮಾಡಿ ಗ್ರಾಮ ಪಂಚಾಯಿತಿ ಐದು ಸಾವಿರ ರೂಪಾಯಿ ದಂಡ ವಿಧಿಸಿದೆ.
ನೀರು ಚೆಲ್ಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಗ್ರಾ.ಪಂ. ಸದಸ್ಯರು ಸಹಿತ ಸ್ಥಳೀಯ ಟೋಲ್ ಸಿಬ್ಬಂದಿಗಳು ಸೇರಿ ಲಾರಿಯನ್ನು ತಡೆದು, ಸ್ಥಳೀಯವಾಗಿ ಎಚ್ಚರಿಕಾ ಫಲಕದಲ್ಲಿ ನಮೋದಿಸಿದಂತೆ ಗ್ರಾ.ಪಂ.ಐದು ಸಾವಿರ ವಿಧಿಸಿದ್ದು , ಮುಂದೆ ಸಾರ್ವಜನಿಕ ಪ್ರದೇಶದಲ್ಲಿ ಘನತ್ಯಾಜ್ಯ ಸಹಿತ ದ್ರವ ತ್ಯಾಜ್ಯ ಸುರಿದು ಮಲಿನ ಗೊಳಿಸುವ ಮಂದಿಗೆ ಇದು ಪಾಠವಾಗ ಬೇಕಾಗಿದೆ ಎಂದಿದ್ದಾರೆ.