ಸಿದ್ದಾಪುರ: ಜೂ.15ರಂದು ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್(ರಿ).ಬೆಚ್ಚಳ್ಳಿ, ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭ

ಸಿದ್ದಾಪುರದ ಸಾವಯವ ಕೃಷಿ ಪರ ಹಾಗೂ ಸಾರ್ವಜನಿಕ ಮಹಿಳಾ ಮತ್ತು ಮಕ್ಕಳ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ರಾಜೇಂದ್ರ ಪೂಜಾರಿ ಸಾರಥ್ಯದಲ್ಲಿ ಸಾರ್ವಜನಿಕ ಕಳಾಕಳಿಯ ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್. (ರಿ)ಬೆಚ್ಚಳ್ಳಿ ಹೊಸಂಗಡಿಯ ನೋಂದಾಯಿತ ಪ್ರಥಮ ಸಾಲಿನಲ್ಲೇ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಟ್ರಸ್ಟ್ ಆಗಿದೆ.
ಇದರ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ:15-06-2025ನೇ ಆದಿತ್ಯವಾರ ಬೆಳಿಗ್ಗೆ ಘಂಟೆ 09.00ಕ್ಕೆ ಶ್ರೀ ರಂಗನಾಥ ಸಭಾಭವನ, ಸಿದ್ದಾಪುರದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀ ಮಾನ್ಯ ಕೆ ಪ್ರತಾಪ್ ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘ. ಅಧ್ಯಕ್ಷರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಗೌರವಾಧ್ಯಕ್ಷರಾದ ಭೋಜು ಪೂಜಾರಿ, ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್(ರಿ) ಬೆಚ್ಚಳ್ಳಿ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ,

ಮುಖ್ಯ ಅತಿಥಿಗಳಾಗಿ ಶ್ರೀ ಸೀತಾರಾಮ ಗಾಣಿಗ ಭಾರತೀಯ ಕಿಸಾನ್ ಸಂಘ, ಕುಂದಾಪುರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರು, ಶ್ರೀ ಅಶೋಕ್ ಪೂಜಾರಿ ಬೀಜಾಡಿ ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಕುಂದಾಪುರ,
ಶ್ರೀ ಸುಧಾಕರ ಆಜ್ರಿ, ಉಡುಪಿ ಜಿಲ್ಲಾ ಗ್ರಾಮ ವಿಕಾಸ ಸಹ ಸಂಯೋಜಕರು, ಪರಶುರಾಮ ಎಂ. ಮುತ್ತಪ್ಪಗೋಳ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ, ವಂಡ್ಸೆ, ಹಾಗೂ ಶ್ರೀ ಗಜೇಂದ್ರ ಎಂ. ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹೊಸಂಗಡಿ ಮತ್ತು
ಶ್ರೀ ಮುಸ್ತಾಕ್ ಹೆನ್ನಾಬೈಲ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಇವರುಗಳು ಭಾಗವಹಿಸಲಿದ್ದಾರೆ.
ಈ ಸಂಸ್ಥೆಯು ಪ್ರಥಮ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ತಮ್ಮ ಟ್ರಸ್ಟ್ ನಿಂದ ಹೆಚ್ಚಿನ ಕಾಳಜಿಯೊಂದಿಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧ ಅನೂಪ್ ಪೂಜಾರಿ ಬೀಜಾಡಿ ಕುಟುಂಬಕ್ಕೆ ಗೌರವ ಸಮರ್ಪಣೆ, 2024-2025ನೇ ಸಾಲಿನಲ್ಲಿ ಶೇ.100 ಫಲಿತಾಂಶ ಪಡೆದ ಆಯ್ದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಗುರುತಿಸಿ ಗೌರವಿಸುವ ಕಾರ್ಯ, 2024-2025ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಹಾಗೂ ಡಿಗ್ರಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತುಸಿ ಗೌರವಿಸುವುದು, ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು, ಸಿದ್ದಾಪುರ ವಲಯದ ಅಂಗನವಾಡಿ ಮೇಲ್ವಿಚಾಕರಿ ಸೇರಿದಂತೆ 27 ಅಂಗನವಾಡಿ ಶಿಕ್ಷಕಿಯರಿಗೆ ಗೌರವ ಅಭಿನಂದನೆ ಹಾಗೂ
ಕೃಷಿಯನ್ನು ತೊಡಗಿಸಿಕೊಂಡ ಶಾಲೆಗಳನ್ನು ಗುರುತಿಸಿ ಗೌರವಿಸುವುದು ಮತ್ತು ಅನಾರೋಗ್ಯ ಪೀಡಿತ ಮಗುವಿಗೆ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ, ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚೆಂದಗಾಣಿಸಿ ಕೊಡಬೇಕೆಂದು ಪ್ರಕಟಣೆಯಲ್ಲಿ ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟಿ ನ ಗೌರವಾಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.
