ಐಎಎಸ್ ಅಧಿಕಾರಿಯಾಗಿ ಭಡ್ತಿಪಡೆದ ಸದಾಶಿವ ಪ್ರಭು : ಬಂಟಕಲ್ಲು ದೇವಳದ ಆಡಳಿತ ಮಂಡಳಿ ವತಿಯಿಂದ ಸನ್ಮಾನ

ಐಎಎಸ್ ಅಧಿಕಾರಿಯಾಗಿ ಭಡ್ತಿ ಪಡೆದ ಸದಾಶಿವ ಪ್ರಭುರವರಿಗೆ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ವತಿಯಿಂದ ಅಭಿನಂದಿಸಲಾಯಿತು. ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿದ್ದ ಸದಾಶಿವ ಪ್ರಭುರವರು ಭಾರತ ಸರಕಾರದಿಂದ ಐಎಎಸ್ ಅಧಿಕಾರಿಯಾಗಿ ಭಡ್ತಿ ಪಡೆದು, ಬೆಂಗಳೂರು ಮೇಲ್ಮನವಿ ನ್ಯಾಯ ಮಂಡಳಿ ಸದಸ್ಯರಾಗಿ ಪ್ರಥಮ ಬಾರಿಗೆ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭ ಶ್ರೀ ಕ್ಷೇತ್ರದ ವತಿಯಿಂದ ಶ್ರೀದೇವಳದ ಆಡಳಿತ ಮಂಡಳಿ ಹಾಗೂ ರಾಜಾಪುರ ಸಾರಸ್ವತ ಯುವವೃಂದದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಸದಾಶಿವ ಪ್ರಭು ದಂಪತಿಯನ್ನು ಶ್ರೀಕ್ಷೇತ್ರದ ವೈದಿಕರಾದ ವೇದಮೂರ್ತಿ ಸಂದೇಶ್ ಭಟ್ ಶ್ರೀದೇವರ ಗಂಧಪ್ರಸಾದ ನೀಡಿ ಹರಿಸಿದರು.ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಅಧ್ಯಕ್ಷ ಜಯರಾಮ ಪ್ರಭು ಶಾಲು ಹಾರ ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಿದರು. ಆರ್‍ಎಸ್‍ಬಿ ಯುವವೃಂದದ ವತಿಯಿಂದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್, ಅಧ್ಯಕ್ಷ ರಾಘವೇಂದ್ರ ನಾಯಕ್ ಪಾಲಮೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವಾಸುದೇವ ನಾಯಕ್, ಶ್ರೀಶ ನಾಯಕ್, ಸುವರ್ಧನ್ ನಾಯಕ್, ಶ್ರೀದೇವಳದ ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ್ ಪ್ರಭು, ಉಪೇಂದ್ರ ನಾಯಕ್, ಸುರೇಂದ್ರ ನಾಯಕ್, ಸಂತೋಷ್ ನಾಯಕ್, ಗಣಪತಿ ನಾಯಕ್, ಕಛೇರಿ ವ್ಯವಸ್ಥಾಪಕ ಕೃಷ್ಣಮೂರ್ತಿ ಪಾಟ್ಕರ್, ವೀರೇಂದ್ರ ಪಾಟ್ಕರ್, ವೈದಿಕರಾದ ಸುಧೀಂದ್ರ ಭಟ್, ನರೇಶ್ ಭಟ್, ರವಿಚಂದ್ರ ಭಟ್, ರವೀಶ್ ಭಟ್, ಶ್ರೀಶಾಂತ್ ಭಟ್, ಶ್ರೀಕಾಂತ್ ಭಟ್, ಯುವೃಂದದ ಸದಸ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.