ಕಂಬಳ ಕ್ರೀಡೆಯನ್ನು ರಾಜ್ಯದ ಪ್ರಮುಖ ಕ್ರೀಡೆಯಾನ್ನಾಗಿಸಲು ಜಿಲ್ಲಾಡಳಿತ ಸಿದ್ಧ : ಜಿಲ್ಲಾಧಿಕಾರಿ ರವಿಕುಮಾರ್ ಎಂ

ಜಿಲ್ಲೆಯ ರೈತಾಪಿ ಜನರ ಜನಪದ ಕಂಬಳ ಕ್ರೀಡೆಗೆ ಸರಕಾರದ ಸಂಪೂರ್ಣ ಸಹಕಾರವಿದ್ದು, ಕ್ರೀಡೆಯನ್ನು ಸರಕಾರದ ವತಿಯಿಂದ ನಡೆಸಲಾಗುತ್ತಿದ್ದು, ಕಂಬಳ ಕ್ರೀಡೆಯನ್ನು ರಾಜ್ಯದ ಪ್ರಮುಖ ಕ್ರೀಡೆಯನ್ನಾಗಿಸಲು ಜಿಲ್ಲಾಡಳಿತ ಸದಾ ಸಿದ್ಧ. ಶ್ರೀಘದಲ್ಲಿಯೇ ಕಂಬಳೋತ್ಸವಕ್ಕೆ ಸರಕಾರದಿಂದ 2ಕೋಟಿ ಅನುದಾನ ನಿಗಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಹೇಳಿದರು.

ಅವರು ಇತಿಹಾಸ ಪ್ರಸಿದ್ದ ಐಕಳಬಾವ ಕಾಂತಾಬಾರೆ ಬೂದಬಾರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಹಕಾರಿ ರತ್ನ ಡಾ ಎಂ ಎನ್ ರಾಜೇಂದ್ರ ಕುಮಾರ್ ಸಭಾ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಶುಭ ಹಾರೈಸಿದರು. ಈ ಸಂಧರ್ಭ ಸಮಸ್ತ ಕಂಬಳಾಭಿಮಾಬಿಗಳ ಪರವಾಗಿ ಡಾ.ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ಸಹಕಾರಿ ಸಾರಥಿ ಬಿರುದು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ.ಅದಾನಿ ಪೌಂಡೇಶನ್ ಅಧ್ಯಕ್ಷ ಕಿಶೋರ್ ಆಳ್ವಾ., ರೋಹನ್ ಕಾಪೆರ್Çೀರೇಶನ್ ಆಡಳಿಯ ನಿರ್ದೇಶಕ ರೋಹನ್ ಮೊಂತೇರೋ.ವೈದ್ಯರಾದ ಡಾ.ಟಿರಮಾನಾಧ ಶೆಟ್ಟಿ.ಐಕಳಬಾವ ಕುಟುಂಬದ ಹಿರಿಯರಾದ ಶಾಂಭವಿ ಶಂಕರ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ.
ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕರು ಐವನ್ ಡಿಸೋಜ.ಮಂಗಳೂರು ಕೆಎಮ್ ಎಫ್ ನ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ.ಕನ್ನಡ ಹಾಗೂ ತುಳು ಚಲನಚಿತ್ರ ನಟರಾದ ಪ್ರಕಾಶ್ ತೂಮಿನಾಡು ಹಾಗೂ ಮೈಮ್ ರಾಮ್ ದಾಸ್.ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಅರುಣ್ ರೈ ತೋಡಾರ್. ಕಂಬಳ ಸಮಿತಿಯ ಅಧ್ಯಕ್ಷ ಡಾ ದೇವಿಪ್ರಸಾದ್ ಶೆಟ್ಟಿ.ಕಾರ್ಯಧ್ಯಕ್ಷ ಚಿತ್ತರಂಜನ್ ಭಂಡಾರಿ.ಮುಂಬಯಿ ಸಮಿತಿಯ ಅಧ್ಯಕ್ಷ ಕುಶಾಲ್ ಭಂಡಾರಿ ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು.ಸಂಚಾಲಕರಾದ ಐಕಳ ಮುರಳೀಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Related Posts

Leave a Reply

Your email address will not be published.