ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ 47ನೇ ವರ್ಷದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಮಂಗಳೂರು ವಿಶ್ವವಿದ್ಯಾನಿಲಯ, ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ನಲವತ್ತೇಳನೇ ವರ್ಷದ ವಾರ್ಷಿಕ ವಿಶೇಷ ಶಿಬಿರವು ಫೆ. 22ನೇ ಶನಿವಾರದಿಂದ ಫೆ. 28 ಶುಕ್ರವಾರದವರೆಗೆ ಮಂಡೆಕೋಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನದಲ್ಲಿ ನಡೆಯುತ್ತಿದ್ದು ಈ ಶಿಬಿರವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಡಾ| ರುದ್ರಕುಮಾರ್ ಎಂ. ಎಂ., ಪ್ರಾಂಶುಪಾಲರು, ಎನ್.ಎಂ.ಸಿ. ಸುಳ್ಯ; ಕುಶಲ ಉದ್ದಂತಡ್ಕ, ಅಧ್ಯಕ್ಷರು, ಗ್ರಾಮ ಪಂಚಾಯತ್, ಮಂಡೆಕೋಲು; ಪ್ರತಿಮಾ ಹೆಬ್ಬಾರ್, ಉಪಾಧ್ಯಕ್ಷರು, ಗ್ರಾಮ ಪಂಚಾಯತ್, ಮಂಡೆಕೋಲು; ಯೋಗೀಶ್, ಕೆ. ಎನ್. ಅಧ್ಯಕ್ಷರು, SDMC ಸ.ಕಿ.ಪ್ರಾ.ಶಾಲೆ, ಕನ್ಯಾನ, ಸುಳ್ಯ; ಡಾ। ಅನಂತ ಪದ್ಮನಾಭ ಭಟ್ ಎರ್ಕಲ್ಪಾಡಿ, ಗೌರವಾಧ್ಯಕ್ಷರು, SDMC ಸ.ಕಿ.ಪ್ರಾ.ಶಾಲೆ, ಕನ್ಯಾನ; ಸುರೇಶ್ ಕಣೆಮರಡ್ಕ, ಅಧ್ಯಕ್ಷರು, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಮಂಡೆಕೋಲು; ಪ್ರಮೀಳಾ, ನಿವೃತ್ತ ಅಧ್ಯಾಪಕರು, ಕನ್ಯಾನ; ಕೇಶವ ಮೂರ್ತಿ ಹೆಬ್ಬಾರ್, ಅಧ್ಯಕ್ಷರು, NSS ಕ್ಯಾಂಪ್ ಸ್ವಾಗತ ಸಮಿತಿ, ಮಂಡೆಕೋಲು; ಸುನಿತಾ ಎಂ. ಎನ್. ಮುಖ್ಯಶಿಕ್ಷಕರು, ಸ.ಕಿ.ಪ್ರಾ.ಶಾಲೆ ಕನ್ಯಾನ; ಧನಲಕ್ಷ್ಮಿ, ಸಮೂಹ ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಣ ಸಂಯೋಜಕರು, ಸುಳ್ಯ; ಸಂಜೀವ ಕುದ್ದಾಜೆ, ಎನ್.ಎಸ್.ಎಸ್. ಸಲಹಾ ಸಮಿತಿ, ಎನ್ನೆಂಸಿ ಸುಳ್ಯ ಉಪಸ್ಥಿತರಿದ್ದರು.

ಶಿಬಿರಾಧಿಕಾರಿ ಚಿತ್ರಲೇಖ ಕೆ ಎಸ್ ಸ್ವಾಗತಿಸಿದರು. ಶಿಬಿರಾಧಿಕಾರಿ ಹರಿಪ್ರಸಾದ್ ಅತ್ಯಾಡಿ ಪ್ರಾಸ್ತಾವಿಕ ಮಾತನಾಡಿ, ಹವ್ಯಶ್ರೀ ಧನ್ಯವಾದ ಸಲ್ಲಿಸಿ, ಅಕ್ಷತಾ ಸಿ ಕಾರ್ಯಕ್ರಮ ನಿರೂಪಿಸಿದರು. ಊರಿನ ಹಲವಾರು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಿಬಿರ ಯಶಸ್ವಿಯಾಗಿ ನಡೆಯುತ್ತಿದೆ.
