ಭಾರತದಲ್ಲಿ ಶಿಕ್ಷಣ ಕಡೆಗಣಿಸಿ ಮದುವೆಗೆ ವೆಚ್ಚ
ಭಾರತದಲ್ಲಿ ಓದು ಕಡೆಗಣಿಸಿ ಮದುವೆಗೆ ಹೆಚ್ಚು ವೆಚ್ಚ ಮಾಡಲಾಗುತ್ತಿದೆ ಎಂದು ಜಾಗತಿಕ ಬ್ರೋಕರೇಜ್ ಸಂಸ್ಥೆ ಜೆಫರಿಸ್ ವರದಿ ಮಾಡಿದೆ.
ಭಾರತದಲ್ಲಿ ಚೀನಾ ಮತ್ತು ಇತರ ದೇಶಗಳಿಗಿಂತ ಹೆಚ್ಚು ವರುಷದಲ್ಲಿ ೮೦ ಲಕ್ಷದಿಂದ ಒಂದು ಕೋಟಿಯವರೆಗೆ ಮದುವೆಗಳು ನಡೆಯುತ್ತವೆ. ಭಾರತದ ಮದುವೆಯೊಂದಕ್ಕೆ ಸರಾಸರಿ ೧೨.೫೦ ಲಕ್ಷ ರೂಪಾಯಿ ಖರ್ಚಾಗುತ್ತದೆ. ಭಾರತದ ಮದುವೆ ಮಾರುಕಟ್ಟೆ ಮೌಲ್ಯವು ೧೦ ಲಕ್ಷ ಕೋಟಿ ರೂಪಾಯಿ ಇದೆ. ಭಾರತದ ಆಹಾರ ಮತ್ತು ತರಕಾರಿ ಮಾರುಕಟ್ಟೆ ಮೌಲ್ಯ ೫೬.೭೬ ಲಕ್ಷ ಕೋಟಿ ರೂಪಾಯಿ ಇದೆ. ಮದುವೆ ಎರಡನೆಯ ಸ್ಥಾನದಲ್ಲಿದೆ.ಭಾರತದಲ್ಲಿ ಮಕ್ಕಳನ್ನು ಪ್ರಾಥಮಿಕದಿಂದ ಪದವಿಯವರೆಗೆ ಓದಿಸಲು ಮಾಡುವ ವೆಚ್ಚಕ್ಕಿಂತ ಹೆಚ್ಚು ಹಣ ಮದುವೆಗೆ ವ್ಯಯಿಸುವುದಾಗಿ ವರದಿಯಲ್ಲಿ ಹೇಳಲಾಗಿದೆ.