ಮೂಡಬಿದರೆ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಸಿಎಂ ಬೊಮ್ಮಯಿ ಭೇಟಿ

ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಐದನೇ ದಿನ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಬಾಗವಹಿಸಿದರು
ಬಳಿಕ ಮಾತನಾಡಿದ ಅವರು ಮೂಡುಬಿದಿರೆ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ. ಇದು ಮಗುವು ಉತ್ತಮ ಸಾಧಕನಾಗಲು ಎಡೆಮಾಡಿಕೊಡುತ್ತದೆ.ಭಾರತದ ಭವಿಷ್ಯ ಸಂಸ್ಕ್ರತಿಯ ಉಳಿವಿಕೆಯ ಮೇಲೆ ನಿರ್ಧರಿತವಾಗಿದೆ. ಸೌಟ್ಸ್- ಗೈಡ್ಸ್ ಸಂಸ್ಥೆ ಸದಾ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮಾತನಾಡಿ ಸೌಟ್ಸ್ ಗೈಡ್ಸ್ ಸಂಸ್ಥೆ ಮಕ್ಕಳಿಗೆ ಗೌರವಯುತ ಜೀವನ ನಡೆಸಲು ಬೇಕಾದ ಮೌಲ್ಯವನ್ನು ನಿರ್ದೇಶಿಸುತ್ತಿದೆ ಇದು ಸಂಸ್ಥೆಗೆ ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಆರತಿ ಮಾಡುವ ಮೂಲಕ ಗೌರವಿಸಿ ಸನ್ಮಾನಿಸಲಾಯಿತು. ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳು ಗೌರವದ ಆರತಿ ಎಂಬ ಹಾಡನ್ನು ಹಾಡಿದರು. ಉದ್ಯಮಿ ಶ್ರೀಪತಿ ಭಟ್ ಕುಟುಂಬವೂ ಶಾಲು ಹೊದಿಸಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಬೆಳ್ಳಿಯ ಚಿತ್ರ ಪಟ ಉಡುಗೊರೆ ನೀಡಿ ವಿಶೇಷ ಗೌರವ ಸೂಚಿಸಿದರು.
ಕಾರ್ಯಕ್ರಮದಲ್ಲಿ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಕರ್ನಾಟಕ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಕ್ರೀಡಾ ಸಚಿವ ನಾರಯಣ ಗೌಡ, ಭಾರತ್ ಸೌಟ್ಸ್ -ಗೈಡ್ಸ್ ಅಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಅನಿಲ್ ಕುಮಾರ್ ಜೈನ್. ಕರ್ನಾಟಕ ರಾಜ್ಯ ಸೌಟ್ಸ್ ಗೈಡ್ಸ್ ಆಯುಕ್ತ ಪಿ.ಜಿ ಆರ್ ಸಿಂದ್ಯಾ, ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ, ಜಿಲ್ಲಾ ಪಂಚಾಯತ್ ಸಿಇಒ ಡಾ. ಕುಮಾರ್, ಜಿಲ್ಲಾಧಿಕಾರಿ ರವಿ ಕುಮಾರ್ ಎಂ ಆರ್, ಉದ್ಯಮಿ ಶ್ರೀಪತಿ ಭಟ್, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.