ಸುಳ್ಯ: ರಾಷ್ಟ್ರೀಯ ವಿಚಾರ ಸಂಕಿರಣದ ಆಮಂತ್ರಣ ಪತ್ರ ಹಾಗೂ ಕರಪತ್ರದ ಅನಾವರಣ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 2 ರಂದು ನಡೆಯಲಿರುವ ರಾಷ್ಟ್ರೀಯ ವಿಚಾರ ಸಂಕಿರಣದ ಆಮಂತ್ರಣ ಪತ್ರ ಹಾಗೂ ಕರಪತ್ರದ ಅನಾವರಣ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ಹಾಗೂ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಆಮಂತ್ರಣ ಪತ್ರ ಹಾಗೂ ಕರಪತ್ರವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಬಂಟಮಲೆ ಅಕಾಡೆಮಿಯ ಅಧ್ಯಕ್ಷ ಹಿಮಕರ ಎ ಕೆ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ. ವಿಚಾರ ಸಂಕಿರಣದ ಸಂಯೋಜಕಿ ಡಾ. ಅನುರಾಧಾ ಕುರುಂಜಿ, ಸಹ ಸಂಯೋಜಕರಾದ ಸಂಜೀವ ಕುದ್ಪಾಜೆ, ಡಾ. ಮಮತಾ ಕೆ, ಲತೀಶ್ ಕುಮಾರ್ ಕೆ. ಹಾಗೂ ಕಛೇರಿ ಸಿಬ್ಬಂದಿ ಪವನ್ ಉಪಸ್ಥಿತರಿದ್ದರು.

add - Anchan ayurvedic

Related Posts

Leave a Reply

Your email address will not be published.