ಮಂಗಳೂರು ಸ್ಮಾರ್ಟ್‍ಸಿಟಿ ಕಾಮಗಾರಿ ಅವೈಜ್ಞಾನಿಕ : ಮಂಗಳೂರಿನಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿಕೆ

ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದೀಗ ಜನತೆಗೆ ತೊಂದರೆ ಉಂಟಾಗಿದೆ. ಅಧಿಕಾರಿಗಳು ತಪ್ಪು ಮಾಡಿದ್ದಲ್ಲಿ ಜನಪ್ರತಿನಿಧಿಗಳು ಕೇಳಬೇಕು, ಸಾಮಾನ್ಯ ಜನರಿಗೆ ನ್ಯಾಯ ಎಲ್ಲಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಪೂರ್ವ ಆಲೋಚನೆ, ಪೂರ್ವ ಯೋಜನೆ ಬೇಕು.ನಗರದಲ್ಲಿ ಚರಂಡಿ, ರಾಜಕಾಲುವೆಗಳ ಹೂಳೆತ್ತುವ ಕೆಲಸ ನಾಲ್ಕು ತಿಂಗಳ ಹಿಂದೆಯೇ ಆಗಬೇಕಿತ್ತು. ಮೇ ತಿಂಗಳಲ್ಲಿ ರಸ್ತೆ ಅಗೆಯುವಂತಿಲ್ಲ. ಸೆಪ್ಟಂಬರ್ ತಿಂಗಳ ಬಳಿಕ ಅಮೃತ ಯೋಜನೆ, ಜಲಸಿರಿ, ಗೇಲ್ ಕಾಮಗಾರಿ ಮಾಡುತ್ತಿದ್ದಾರೆ. ಇದಕ್ಕೆಲ್ಲ ಯಾರು ಜವಾಬ್ದಾರರು ಎಂದು ಲೋಬೋ ಅವರು, ಕೋಟ್ಯಾಂತರ ರೂ ಖರ್ಚು ಮಾಡಿ ಕಾಮಗಾರಿಗಳನ್ನು ಮಾಡುತ್ತಿದ್ದಾರಲ್ಲಾ ಯಾರ ದುಡ್ಡಿನಲ್ಲಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ವಿಶ್ವಾಸ್‍ದಾಸ್, ಅಪ್ಪಿ, ಟಿ.ಕೆ. ಸುದೀರ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.