ಮನಪಾ ಪೌರಕಾರ್ಮಿಕರನ್ನು ಖಾಯಂಗೊಳಿಸಿ, ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಿ ಮಾಜಿ ಶಾಸಕ ಜೆ.ಆರ್. ಲೋಬೋ ಆಗ್ರಹ
ಮಂಗಳೂರು ಪಾಲಿಕೆಯ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಅವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ಪೌರಕಾರ್ಮಿಕರು ಸರಿಯಾದ ಕೆಲಸ ಮಾಡಿದ್ದಲ್ಲಿ ಅವರನ್ನು ಖಾಯಂಗೊಳಿಸಿ. ಖಾಸಗಿ ಕಚೇರಿ ಕೆಲಸ ನಡೆಸುದಾದಲ್ಲಿ ಲೇಬರ್ ಡಿಪಾರ್ಟ್‍ಮೆಂಟ್ ಇದೆ. ಹಾಗಿರುವಾಗ ಕೆಲಸದ ಅವಧಿ, ಇಎಸ್‍ಐ, ಪಿ.ಎಫ್, ಪಿಂಚಣಿ, ಹೆರಿಗೆ ರಜೆ ಎಲ್ಲಾ ಸೌಕರ್ಯ ಸಿಗಬೇಕು.ಗುತ್ತಿದೆ ತೆಗೆದುಕೊಂಡಲ್ಲಿ ಲೇಬರ್ ಡಿಪಾರ್ಟ್ಮೆಂಟ್ ಕಾನುನು ಅನ್ವಯವಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ವಿಶ್ವಾಸ್‍ದಾಸ್, ಅಪ್ಪಿ, ಟಿ.ಕೆ. ಸುದೀರ್ ಮತ್ತಿತರರು ಉಪಸ್ಥಿತರಿದ್ದರು.