ಕಾಶಿಯಲ್ಲಿ ಜೈ ಸೀತಾ ರಾಮ್ ಧ್ವನಿಸುರುಳಿ ಬಿಡುಗಡೆ

ಸತ್ಯ ಶಾಂತ ಪ್ರತಿಷ್ಠಾನ (ರಿ) ಅರ್ಪಿಸುವ ಶ್ರೀಮತಿ ಶಾಂತಾ ಕುಂಟಿನಿ ಇವರ ಸಾಹಿತ್ಯ ರಚನೆ ಹಾಗೂ ನಿರ್ಮಾಣದ ಅದೇ ರೀತಿ ಸಂಗೀತ ಹಾಗೂ ಗಾಯನ ದ.ಕ ಜಿಲ್ಲೆಯ ಹೆಸರಾಂತ ಗಾಯಕರಾದ ಶ್ರೀ ಅರ್ವಿಂದ್ ವಿವೇಕ್ ಹಾಗೂ ಪ್ರತೀಕ್ಷಾ ಸೌಜನ್ಯ ಗೌಡ, ನಿತಿನ್ ಇವರ ಧ್ವನಿಯಲ್ಲಿ ಮೂಡಿ ಬಂದಿರುವ ಯೂಟ್ಯೂಬ್ ಹಾಡು “ಜೈ ಸೀತಾ ರಾಮ್ ಹಾಡಿನ ಬಿಡುಗಡೆ ಕಾರ್ಯಕ್ರಮವು ದಿನಾಂಕ 18/12/2022 ರಂದು ಸಂಜೆ ಕಾಶಿ ಕನ್ನಡದ ಕಂಪು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಂಗಮವಾಡಿ ಮಠ ವಾರಣಾಸಿ ಕಾಶಿ ಉತ್ತರ ಪ್ರದೇಶ ಇಲ್ಲಿ ಶ್ರೀ ಕಾಶಿ ಜಗದ್ಗುರು ಚಂದ್ರ ಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಬಿಡುಗಡೆ ಗೊಂಡಿತು..ಈ ಹಾಡಿನ ಸಂಕಲನವನ್ನು ಕಬಕದ ಮಿಥುನ್ ಅವರು ನಿರ್ವಹಿಸಿದ್ದಾರೆ. ಸಮೃದ್ಧಿ ಫೌಂಡೇಷನ್ ಬೆಂಗಳೂರು ಕಥಾ ಬಿಂದು ವೇದಿಕೆ ಹಾಗೂ ಶ್ರೀ ಮರುಳ ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು..
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀಮತಿ ಶಾಂತಾ ಕುಂಟಿನಿ, ಶ್ರೀ ರುದ್ರಾರಾಧ್ಯ, ಶ್ರೀ ಸಿದ್ಧ ಲಿಂಗಯ್ಯ, ರವೀಂದ್ರಕಿಣಿ,ಶ್ರೀ ಕೃಷ್ಣ ಮೂರ್ತಿ ಪುದುಕೋಳಿ, ವೆಂಕಟ್ರಮಣ ಭಟ್, ಶ್ರೀಮತಿ ಎಂ.ಎಸ್ ಸುಧಾಮಣಿ, ವೆಂಕಟೇಶ್, ಶ್ರೀ ನಾಗರಾಜ್, ಡಾ/ಪರಮೇಶ್ವರಪ್ಪ ಎಸ್ ಬ್ಯಾಡಗಿ, ಡಾ/ ಬಸವ ಪ್ರಭು ಜಿರಲಿ, ಸುನಿತಾ ಹಾಗೂ ಪ್ರದೀಪ್ ಕುಮಾರ್,ನಳಿನಿ ಗಂಗಾಧರ ಚಿಲುಮೆ, ಶಿವಾನಂದ ಹಿರೇಮಠ, ಮುಂತಾದವರು ಉಪಸ್ಥಿತರಿದ್ದರು.