ಜನಸಂಖ್ಯೆ ತೀವ್ರ ಇಳಿಕೆಯ ಆತಂಕದಲ್ಲಿ ಜಪಾನ್
ನೀವು ಏಕೆ ಮದುವೆ ಆಗುವುದಿಲ್ಲ ಎಂದು ಪ್ರಶ್ನಿಸುತ್ತಿದೆ ಜಪಾನ್ ಸರಕಾರ.
ನಿಮ್ಮ ತುಮುಲ ತಿಳಿದರೆ ನಾವು ಕೃತಜ್ಞರು ಎನ್ನುತ್ತ ಜಪಾನ್ ಮಕ್ಕಳು ಮತ್ತು ಕಲ್ಯಾಣ ಸಚಿವೆ ಆಯುಕೋ ಕತೋ ಅವರು ಯುವ ಜನಾಂಗವನ್ನು ಕೇಳುತ್ತ ದೇಶದ ಜನಸಂಖ್ಯೆ ಇಳಿಮುಖವಾಗಿರುವುದಕ್ಕೆ ಪರಿಹಾರ ಹುಡುಕುತ್ತಿದ್ದಾರೆ.
ಚಿಲ್ಡ್ರನ್ ಆಂಡ್ ಫ್ಯಾಮಿಲೀಸ್ ಏಜೆನ್ಸಿ ಮೂಲಕ ಜಪಾನ್ ಸರಕಾರವು ಅಲ್ಲಿನ ಯುವ ಜನಾಂಗವು ನಿಮಗೆ ಮದುವೆ ಆಗಲು ಇರುವ ಸಮಸ್ಯೆ ಏನು ಎಂದು ಪ್ರಶ್ನಿಸುತ್ತಿದೆ. ಡೇಟಿಂಗ್, ಮ್ಯಾಚ್ ಮೇಕಿಂಗ್, ಮಾತುಕತೆ ಮೊದಲಾದ ದಾರಿಯಲ್ಲಿ ಯುವ ಜನಾಂಗದ ಮದುವೆಗೆ ಜಪಾನ್ ಸರಕಾರವು ತಜ್ಞರ ತಂಡ ರಚಿಸಿ ಪ್ರಯತ್ನ ನಡೆಸಿದೆ.