ನಗರದ ಉದ್ಯಾನವನಗಳ ಸುಸ್ಥಿತಿಗೆ ಮೊದಲ ಆದ್ಯತೆ : ಮನಪಾ ಮೇಯರ್ ಜಯಾನಂದ ಅಂಚನ್ ಹೇಳಿಕೆ
ಮಂಗಳೂರು: ಸಂಘ ಸಂಸ್ಥೆಗಳು, ಪತ್ರಕರ್ತರ ರು ಸೇರಿದಂತೆ ಎಲ್ಲರ ಸಹಯೋಗದಲ್ಲಿ ನಗರದ ಉದ್ಯಾನವನಗಳ ಸುಸ್ಥಿತಿಗೆ ಆದ್ಯತೆ ನೀಡಲಾಗುವುದು ಎಂದು ಮನಪಾ ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕ ಮತ್ತು ಇನ್ನರ್ ವೀಲ್ ಕ್ಲಬ್ ಮಂಗಳೂ ರು ನಾರ್ತ್ ಸಹಯೋಗ ದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮವನ್ನು ಅವರು ಇಂದು ಮಂಗಳೂ ರು ಮಹಾನಗರ ಪಾಲಿಕೆ ಇಂದಿರಾ ಪ್ರಿಯ ದರ್ಶಿ ನಿ ಉದ್ಯಾನವನ ಹ್ಯಾಟ್ ಹಿಲ್ ಆವರಣದ ಲ್ಲಿಂದು ಉದ್ಘಾಟಿಸಿ ಮಾತನಾಡುತ್ತಿದ್ದರು.ನಗರದ ಅಭಿವೃದ್ಧಿಯಲ್ಲಿ ಉದ್ಯಾನ ವನಗಳ ಅಭಿವೃದ್ಧಿ ,ಸ್ವಚ್ಛಪರಿಸರ,ಮೂಲ ಸೌಕರ್ಯ ಗಳ ಅಭಿವೃದ್ಧಿ ಗೆ ಗಮನಹರಿಸಲಾಗುತ್ತಿದೆ ಎಂದು ಜಯಾನಂದ ತಿಳಿಸಿದ್ದಾರೆ.ಮನಪಾ ಉಪ ಮೇಯರ್ ಪೂರ್ಣಿಮಾಮನಪಾ ಸದಸ್ಯರಾದ ಸಂಧ್ಯಾ ಮೋಹನ ಆಚಾರ್ಯ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಸಭಾಪತಿ ಶಾಂತಾರಾಮ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ಇದರ ಅಧ್ಯಕ್ಷೆ ವಸಂತಿ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.