ಜೇಸಿಐ ಪಂಜ ಪಂಚಶ್ರೀ ವತಿಯಿಂದ ಪ್ರೋಟೀನ್ ಪೌಡರ್ ವಿತರಣೆ

ಜೇಸಿಐ ಪಂಜ ಪಂಚಶ್ರೀ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಅಂಗನವಾಡಿ ಕೇಂದ್ರ ಪಂಜ ಇದರ ಆಶ್ರಯದಲ್ಲಿ ಕಡಿಮೆ ತೂಕದ ಪಂಜ ಅಂಗನವಾಡಿ ಮಕ್ಕಳಿಗೆ ಪ್ರೋಟೀನ್ ಪೌಡರ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಸಿಐ ಪಂಜ ಪಂಚಶ್ರೀಯ ಘಟಕ ಅಧ್ಯಕ್ಷರಾದ ಜೆಫ್ ಮ್. ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು

ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ರಶ್ಮಿ ಕೆ. ಎಂ, ವಲಯ ಮೇಲ್ವಿಚಾರಕಿ ಯಾದ ಶ್ರೀಮತಿ ರವಿಶ್ರೀ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ರಾಹೇಲಮ್ಮ,ಪಂಜ ಹಾಗೂ ಎಡಮಂಗಲ ವಲಯದ C.H.O ಶ್ರೀಮತಿ ಧನುಶ್ರೀ, ಪಂಜ ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಭಾಗಿರತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರುಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜದ ಆಶಾ ಕಾರ್ಯಕರ್ತೆಯರು ಹಾಗೂ ಪೋಷಕ ವೃಂದದವರು ಭಾಗವಹಿಸಿದ್ದರು.ಜೇಸಿಐ ಪಂಚಶ್ರೀಯ ಕಾರ್ಯದರ್ಶಿಯಾದ ಜೇಸಿ. ಕೌಶಿಕ್ ಕುಳ ಧನ್ಯವಾದ ಸಮರ್ಪಿಸಿದರು.

Related Posts

Leave a Reply

Your email address will not be published.