ಜೆಇಇ ಮೈನ್ ಪರೀಕ್ಷೆ : ಆಳ್ವಾಸ್ ಪಿ.ಯು ವಿದ್ಯಾರ್ಥಿಗಳಿಂದ ಸಾಧನೆ

ಮೂಡುಬಿದಿರೆ: ರಾಷ್ಟ್ರ ಮಟ್ಟದಲ್ಲಿ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಬ್ಬರು ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಒಟ್ಟು 25 ಮಂದಿ 95 ಪರ್ಸೆಂಟೈಲ್‌ಗಿಂತ ಅಧಿಕ, 60 ಮಂದಿ 90 ಪರ್ಸೆಂಟೈಲ್‌ಗಿಂತ ಅಧಿಕ, ಹಾಗೂ 103 ಮಂದಿ 85 ಪರ್ಸೆಂಟೈಲ್‌ಗಿಂತ ಅಧಿಕ, ಫಲಿತಾಂಶ ಗಳಿಸಿದ್ದಾರೆ.

ಶರತ್ ಸಂಗಮೆಶ್ ಬಿರದರ್ (99.23), ಪ್ರಧ್ಯುಮ್ನ ಭಟ್ (99.07), ಸಂಭವ್ ಪವರ್ (98.87), ಕಿಶೋರ್ ಆರ್. (98.53), ಸಮನ್ಯು (97.99), ಮುಕುಂದ್ ಅಶೋಕ್ ಗೋಪಾಲಪ್ಪಗೋಲ್ (97.58), ತನೀಶ್ ಪಿ.ಎಂ. (97.56), ಪ್ರಚೀತಾ ಎಂ. (97.41), ಸಮರ್ಥ್ ಆರ್ ಬನ್ನಿ (97.29), ಸ್ಪೂರ್ತಿ ಕೊಟಗಿ (96.99), ಸಚೇತನ್ ಶಿವಪುತ್ರ ಇಂಚಲ್ (96.83), ಅಫನ್ ಯಾಸೀರ್ (96.61), ಪ್ರಥಮ್ ಡಿ.ಶೆಟ್ಟಿ (96.59), ಯಶಸ್ ಗೌಡ ಎಮ್ (96.48), ಮೇಘನಾ ಡಿ.ಹೆಗ್ಡೆ (96.36), ಅಭಿಷೇಕ್ ಮಹಾದೇವ್ ಚಿಮ್ಮದ್ (96.21), ಕವನಾ ಎನ್. (96.15), ವಿನಯ್ ಹೆಚ್ ಆರ್ (96.01), ವಿಶ್ವದೀಪ್ ಕೆ.ವಿ (95.85), ಎಸ್.ವಿ ಶಿವಾಂಜನ್ (95.43), ಅದಿತ್ಯ ಸಜ್ಜ (95.32), ಮೋವಿನ್ ಎಸ್. (95.22), ಮ್ಯಾಕ್ಲಿನ್ ಕ್ರಿಸ್ ಮಿರಿಂದಾ (95.15), ಸುಚಿತ್ ಎಸ್. ಗೌಡ (95.09), ವೀರೇಂದ್ರ ಪಾಂಡುರಂಗ ದೇಸಾಯಿ (95.09) ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಡಾ.ಎಂ ಮೋಹನ ಆಳ್ವ ಮತ್ತು ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ಸದಾಕತ್ ಅಭಿನಂದಿಸಿದ್ದಾರೆ

Related Posts

Leave a Reply

Your email address will not be published.