ಸುರತ್ಕಲ್ : ಜಾರ್ಖಂಡ್ ಮೂಲದ ಯುವಕನ ಹುಚ್ಚಾಟ

ಜಾರ್ಖಂಡ್ ಮೂಲದ ಯುವಕನೊಬ್ಬ ಸುರತ್ಕಲ್ ಬಳಿ ಕತ್ತಿ ಬೀಸಿ ಹುಚ್ಚಾಟ ನಡೆಸಿದ್ದಾನೆ. ಸುರತ್ಕಲ್ ಬಳಿಯ ಕಾನದಲ್ಲಿ ಘಟನೆ ನಡೆದಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯನ್ನು ಅತುಲ್ ಕಲ್ಲು (30) ಎಂದು ಪೆÇಲೀಸರು ಗುರುತಿಸಿದ್ದು ಆತ ಗೋವಾದಿಂದ ಕಾಸರಗೋಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ, ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದಿದ್ದು ಸಾರ್ವಜಕನರ ಜೊತೆ ಒರಟಾಗಿ ವರ್ತಿಸಿದ್ದಾನೆ. ವೆಂಕಪ್ಪ ಎಂಬ ಸ್ಥಳೀಯ ಒಬ್ಬರನ್ನು ಬೆದರಿಸಿ ಅವರ ಬಳಿಯಿದ್ದ ಕತ್ತಿಯನ್ನು ಪಡೆದಿದ್ದಲ್ಲದೆ, ಅದನ್ನು ಬೀಸುತ್ತಾ ಜನರಲ್ಲಿ ಭಯ ಹುಟ್ಟಿಸಿದ್ದ. ಇದೇ ವೇಳೆ, ಗ್ಯಾರೇಜ್ ನಡೆಸುತ್ತಿದ್ದ ಇಮ್ರಾನ್ ಎಂಬವರ ಮೇಲೆ ಕತ್ತಿ ಬೀಸಿದ್ದು ಆತನಿಗೆ ಸ್ವಲ್ಪ ಗಾಯವಾಗಿದೆ. ಬಳಿಕ ಸಾರ್ವಜನಿಕರು ಸೇರಿ ವ್ಯಕ್ತಿಯನ್ನು ಹಿಡಿದಿದ್ದು ಎರಡೇಟು ಬಿಗಿದಿದ್ದಾರೆ. ವ್ಯಕ್ತಿ ಮಾನಸಿಕ ಅಸ್ವಸ್ಥನ ರೀತಿ ವರ್ತಿಸುತ್ತಿದ್ದಾನೆ. ಜನರಿಂದ ಪೆಟ್ಟು ತಿಂದಿರುವ ಕಾರಣದಿಂದ ಸುರತ್ಕಲ್ ಪೊ ಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
