ಜೋಸ್ ಆಲುಕ್ಕಾಸ್ : ಸಂತ ಜೋಸೆಫ್ ಪ್ರಶಾಂತ್ ನಿವಾಸ್ ವೃದ್ದಾಶ್ರಮಕ್ಕೆ ಬೊಲೆರೋ ವಾಹನ ಕೊಡುಗೆ

ಭಾರತದ ಹೆಸರಾಂತ ಸ್ವರ್ಣದ್ಯಮ ಸಂಸ್ಥೆ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ ಸಿಎಸ್‍ಆರ್ ನಿಧಿಯಿಂದ ನಗರದ ಜೆಪ್ಪುವಿನಲ್ಲಿರುವ ಸಂತ ಜೋಸೆಫ್ ಪ್ರಶಾಂತ್ ಶ್ರೀನಿವಾಸ್ ವೃದ್ದಾಶ್ರಮದ ನಿವಾಸಿಗಳ ಅನುಕೂಲಕ್ಕಾಗಿ ಮಹೀಂದ್ರಾ ಬೊಲೆರೋ ವಾಹನವನ್ನು ನಗರದ ಕೆಎಸ್‍ರಾವ್ ರಸ್ತೆಯಲ್ಲಿರುವ ಶೋರೂಂನಲ್ಲಿ ಕೊಡುಗೆಯಾಗಿ ನೀಡಲಾಯಿತು. ಉತ್ತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರಾದ ರಾಘವೇಂದ್ರ ಬೈಂದೂರು ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಆಡಳಿತ ನಿರ್ದೇಶಕ ಪೌಲ್ ಆಲುಕ್ಕಾ ಸಂಸ್ಥೆಯ ಏಳಿಗೆಗೆ ಕಾರಣರಾದ ಎಲ್ಲ ಗ್ರಾಹಕರಿಗೆ ಧನ್ಯವಾದ ಸಮರ್ಪಿಸಿದರು.

ರಾಘವೇಂದ್ರ ಬೈಂದೂರು ಅವರು ಜೋಸ್ ಆಲುಕ್ಕಾಸ್ ಸಂಶ್ಥೆಯ ಕಾರ್ಯವೈಖರಿಯನ್ನು ಹಾಗೂ ಸಂಸ್ಥೆಯು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಮುಕ್ತ ಕಂಠದಿಂದ ಹೊಗಳಿದರು. ಸಂತ ಜೋಸೆಫ್ ಪ್ರಶಾಂತ್ ನಿವಾಸ್ ಇದರ ಅಧೀಕ್ಷಕಿ ಸಿಸ್ಟೆರ್ ಸಿಲ್ವಿಯಾ ಫೆರ್ನಾಂಡಿಸ್ ಇವರನ್ನು ಸನ್ಮಾನಿಸಿ ನಂತರ ಬೊಲೆರೋ ವಾಹನದ ಕೀಲಿ ಕೈಯ್ನು ಹಸ್ತಾಂತರಿಸಲಾಯಿತು.

ಸುಮಾರು 140 ವರ್ಷಕ್ಕೂ ಹಳೆಯ ಇತಿಹಾಸವಿರುವ ಈ ವೃದ್ಧಾಶ್ರಮದಲ್ಲಿ ಸುಮಾರು 300ಕ್ಕೂ ಅಧಿಕ ನಿರಾಶ್ರಿತ ನಿರ್ಗತಿಕರು, ರೋಗಿಗಳು, ಬುದ್ಧಿಮಾಂದ್ಯರು, ಅಂಗವೈಕಲ್ಯವುಳ್ಳವರನ್ನು ಆರೈಕೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯ ಆಡಳಿತ ನಿರ್ದೇಶಕರಾದ ಪೌಲ್ ಆಲುಕ್ಕಾ, ಸೇಲ್ಸ್, ಹೆಡ್ ಕೆ.ಪಿ. ಜೋಸೆಫ್, ಏರಿಯಾ ಮ್ಯಾನೇಜರ್ ಬಿಜು ಟಿ.ಎಲ್. ಏರಿಯಾ ಅಕೌಂಟ್ಸ್ ಮ್ಯಾನೇಜರ್ ಮನೋಜ್, ಸಂಸ್ಥೆಯ ಮ್ಯಾನೇಜರ್‍ಗಳಾದ ಗ್ಲಿಂಟೋ ಜಾನಿ, ಆಗಸ್ಟಿನ್ ಉಪಸ್ಥಿತರಿದ್ದರು. ರಾಕೇಶ್ ಅಚಾರ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
