ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಜೂಲಿಯಟ್-2 ಸಿನಿಮಾ – ಫೆ.24ರಂದು ಬಿಡುಗಡೆ

ಸಿನಿ ಪ್ರೇಕ್ಷಕರ ಬಹುನಿರೀಕ್ಷೆಯ ಕ್ರೈಮ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಮತ್ತು ಹೊಸಬರಿಂದ ಕೂಡಿರುವ ಹಾಗೂ ಉತ್ತಮ ಕಂಟೆಂಟ್ ಹೊಂದಿರುವ ಜೂಲಿಯಟ್-2 ಸಿನಿಮಾ ರಾಜ್ಯಾದ್ಯಂತ ಫೆ.24ರಂದು ಬಿಡುಗಡೆಗೊಳ್ಳಲಿದೆ. ಜೂಲಿಯಟ್-2 ಸಿನಿಮಾ ಹೆಸರೇ ಹೇಳುವಂತೆ ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದೆ. ಈಗಾಗಲೇ ಟೀಸರ್,ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಗೊಂಡಿದ್ದು ಸಿನಿ ಪ್ರೇಕ್ಷರಲ್ಲಿ ಕುತೂಹಲವನ್ನು ಮೂಡಿಸಿದೆ. ಇನ್ನು ನಗರದ ಪ್ರೆಸ್‍ಕ್ಲಬ್‍ನಲ್ಲಿ ಚಿತ್ರತಂಡದವರು ಸುದ್ದಿಗೋಷ್ಟಿ ನಡೆಸಿ ಚಿತ್ರ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿತ್ರದ ನಿರ್ದೇಶಕ ವಿರಾಟ್ ಬಿ ಗೌಡ ಅವರು ಮಾತನಾಡಿ, ಫೆಬ್ರವರಿ 24 ರಂದು ರಾಜ್ಯಾದ್ಯಂತ ಜೂಲಿಯಟ್ 2 ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಒಟ್ಟು 5 ಭಾಷೆಗಳಲ್ಲಿ ತೆರೆ ಕಾಣಲು ಸಿದ್ಧವಾಗಿದ್ದು ಮೊದಲಿಗೆ ಕನ್ನಡ ಬಾಷೆಯಲ್ಲಿಯೆ ಚಿತ್ರ ಬಿಡುಗಡೆಗೊಳ್ಳುತ್ತಿದೆ ಎಂದರು.
ನಂತರ ಚಿತ್ರದ ನಟಿ ಬೃಂದಾ ಆಚಾರ್ಯ ಅವರು ಮಾತನಾಡಿ, ಈ ಸಿನಿಮಾವು ಸ್ವತಂತ್ರ ಮಹಿಳೆಯೊಬ್ಬಳ ಕಥೆ ಆಧಾರಿತ ಚಿತ್ರವಾಗಿದೆ ಮತ್ತು ಮಹಿಳಾ ಸಬಲೀಕರಣ ಮತ್ತು ಸಮಾಜದಲ್ಲಿನ ಅಮಾನವೀಯತೆಯ ವಿರುದ್ಧ ಹೋರಾಟದ ಪರಿಕಲ್ಪನೆಯನ್ನು ಆಧರಿಸಿದ ಚಲನಚಿತ್ರವು ಇದಾಗಿದೆ. ಹಾಗೂ ಎಲ್ಲರ ಪ್ರೀತಿ ಪ್ರೋತ್ಸಾಹ ಈ ಚಿತ್ರದ ಮೇಲೆ ಇರಲಿ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಚಿತ್ರದ ನಟ ಕುಶ್ ಆಚಾರ್ಯ, ಚಿತ್ರದ ನಿರ್ವಾಹಕ ನಿರ್ದೇಶಕ ಸಂಜಯ್ ಯುವಿ ಉಪಸ್ಥಿತರಿದ್ದರು.
ವಿರಾಟ್ ಬಿ ಗೌಡ ನಿರ್ದೇಶನದ ಸಿನಿಮಾ ಮತ್ತು ಲಿಕಿತ್ ಆರ್ ಕೋಟ್ಯಾನ್ ನಿರ್ಮಾಣದ ಚೊಚ್ಚಲ ಸಿನಿಮಾ ಜೂಲಿಯಟ್-2 ಸಿನಿಮಾ ಮಂಗಳೂರು ಮತ್ತು ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಇದೀಗ ತಂಡ ಸಿನಿಮಾ ರಿಲೀಸ್ ಮಾಡುವ ತಯಾರಿಯನ್ನು ನಡೆಸುತ್ತಿದ್ದು, ಫೆ.24ರಿಂದ ರಾಜ್ಯದ ಎಲ್ಲಾ ಥಿಯೇಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಕಾತರದಿಂದ ಕಾಯುತ್ತಿದ್ದ ಸಿನಿ ಪ್ರೇಕ್ಷಕರ ಕುತೂಹಲಕ್ಕೆ ತೆರೆ ಬೀಳಲಿದೆ.
