ಕಡಬ ತಹಸೀಲ್ದಾರ್ ಮೇಲೆ ಭೂಹಗರಣ ಆರೋಪ
ಭೂಹಗರಣ ಆರೋಪ ಹೊತ್ತಿರುವ ಕಡಬ ತಹಸೀಲ್ದಾರ್ ಅವರನ್ನು ಹುದ್ದೆಯಿಂದ ತೆರವುಗೊಳಿಸದಿದ್ದರೆ ಪ್ರತಿಭನೆ : ನೀತಿ ತಂಡ ಎಚ್ಚರಿಕೆಭೂಹಗರಣಕ್ಕೆ ಸಂಬoಧಪಟ್ಟoತೆ ಮೈಸೂರಿನಲ್ಲಿ ಪ್ರಕರಣ ದಾಖಲಾಗಿ ಆರೋಪ ಎದುರುಸುತ್ತಿರುವ ಕಡಬ ತಹಸೀಲ್ದಾರ್ ರಮೇಶ್ ಬಾಬು ಅವರನ್ನು ಹದಿನೈದು ದಿಗಳ ಒಳಗೆ ಹುದ್ದೆಯಿಂದ ತೆರವುಗೊಳಿಸದಿದ್ದೆ ಉಗ್ರ ಪ್ರತಿಭಟನೆ ಎದುರಿಸಬೆಕಾದೀತು ಎಂದು ನೀತಿ ತಂಡ ರಾಜ್ಯಾಧ್ಯಕ್ಷ ಜಯಂತ್ ಟಿ.ಕೆ ಎಚ್ಚರಿಸಿದರು.ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬ್ರಷ್ಟಚಾರ ಆರೋಪ ಹೊತ್ತಿರುವ ರಮೇಶ್ ಬಾಬು ಕಡಬಕ್ಕೆ ಬೇಡವೇ ಬೇಡ ಎಂದು ಹೇಳಿದರು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹಿಮ್ಮಾವು ಗ್ರಾಮದ ಸರ್ವೆ ನಂ.390 ರಿಂದ 422 ಮತ್ರು 424 ರ ಜಮೀನುಗಳಿಗೆ ಸಂಭಂಧಿಸಿದಂತೆ ಅಕ್ರಮವಾಗಿ ಪೌತಿ ಖಾತೆ ಮಾಡಿ 891 ಎಕ್ರೆ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡ್ಲಿಕ್ಕೆ ಕಾರಣರಾಗಿರುವ ಹಗರಣದಲ್ಲಿ ಸರ್ಕಾರಕ್ಕೆ 79 ಕೋಟಿ 29 ಲಕ್ಷ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ 16 ಜನ ಕಂದಾಯ ಅಧಿಕಾರಿಗಳ ವಿರುದ್ಧ 26-12-2022 ರಂದು ನಂಜನಗೂಡು ಟೌನ್ ಪೆÇೀಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪೈಕಿ ಅಂದು ಶಿರಸ್ತೇದಾರಾಗಿದ್ದ ಇಂದಿನ ಕಡಬ ತಹಸೀಲ್ದಾರ್ ರಮೇಶ್ ಬಾಬು ಕೂಡಾ ಓರ್ವರಾಗಿದ್ದಾರೆ. ಇಷ್ಟೊಂದು ದೊಡ್ಡ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಕಳಂಕಿತ ವ್ಯಕ್ತಿ ರಮೇಶ್ ಬಾಬು ಅವರು ಕಡಬ ತಹಸೀಲ್ದಾರ್ ಆಗಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಜಯಂತ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ನೀತಿ ತಂಡದ ಪ್ರಮುಖ ಸಾಬು ಉರುಂಬಿಲ್ ಉಪಸ್ಥಿತರಿದ್ದರು.