ಕಡಬದಲ್ಲಿ ಜಿಲ್ಲಾ ಮಟ್ಟದ ವಿಶ್ವ ಸಾಕ್ಷರತಾ ದಿನಾಚರಣೆ: ಸಾಕ್ಷರತೆಯಿಂದ ಸ್ವಾವಲಂಭಿ ಬದುಕು: ಶೀನ ಶೆಟ್ಟಿ

ಒಂದು ಕುಟುಂಬ ಸಂತೋಷದಿoದ ಜೀವನ ಸಾಗಿಸಬೇಕಾದರೆ ಆ ಕುಟುಂಬದ ಎಲ್ಲರೂ ಸಾಕ್ಷರಸ್ಥರಾಗಿರಬೇಕು. ಅರಿವು, ಶಿಕ್ಷಣ, ಮಾಹಿತಿಯೇ ಸಾಕ್ಷರತೆ. ಸಾಕ್ಷರತೆಯಿಂದ ಮಾತ್ರ ಸ್ವಾವಲಂಭಿ ಬದುಕನ್ನು ನಡೆಸಬಹುದು ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿ ಹಾಗೂ ಜನಶಿಕ್ಷಣ ಟ್ರಸ್ಟ್ ನ ನಿರ್ದೇಕರಾದ ಶೀನ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಬುಧವಾರ ಸೈಂಟ್ ಜೋಕಿಮ್ಸ್ ಸಭಾಭವನದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ, ದ.ಕ.ಜಿ.ಪಂ.ಮoಗಳೂರು, ಜಿಲ್ಲಾ ಸಾಕ್ಷರತಾ ಸಮಿತಿ, ತಾಲೂಕು ಪಂಚಾಯಿತಿ ಕಡಬ ಹಾಗೂ ಜನಶಿಕ್ಷಣ ಟ್ರಸ್ಟ್, ನವಸಾಕ್ಷರರ ಗ್ರಾಮ ವಿಕಾಸ ಕೇಂದ್ರಗಳ ಸಹಭಾಗಿತ್ವದಲ್ಲಿ ನಡೆದ ವಿಶ್ವ ಸಾಕ್ಷರತಾ ದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಮಾತನಾಡಿ, ಈ ಹಿಂದೆ ಸಾಕ್ಷರತಾ ಇಲಾಖೆ ಬೇರೆಯಾಗಿತ್ತು ಆದರೆ ಈಗ ಒಂದೇ ಇಲಾಖೆಯಾಗಿರುವುದರಿಂದ ಎಲ್ಲಾ ಶಾಲಾ ಶಿಕ್ಷಕರು ಅಕ್ಷರ ವಂಚಿತರಿಗೆ ಸಾಕ್ಷರತೆಯನ್ನು ನೀಡುವ ನಿಟ್ಟಿನಲ್ಲಿ ಕೈಜೋಡಿಸಲಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ವಯಸ್ಕ ಅಕ್ಷರ ವಂಚಿತರಿಗೆ ಸಾಕ್ಷರತೆಯನ್ನು ನೀಡುವ ಕಾರ್ಯ ನಡೆಯಲಿದೆ. ಇದಕ್ಕೆ ಗ್ರಾ.ಪಂ.ಗಳ ಜನಪ್ರತಿನಿಧಿಗಳು, ಶಿಕ್ಷಕರು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಅಕ್ಷರ ವಂಚಿತರನ್ನು ಗುರುತಿಸಿ ಜ್ಞಾನವನ್ನು ನೀಡುವ ಕೆಲಸವನ್ನು ಮಾಡಬೇಕಿದೆ ಎಂದರು. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಯಶೋದಾ, ಕಲ್ಮಡ್ಕದ ನಾರಾಯಣ, ಸುಲೋಚನಾ, ಹುಸೇನ್, ಪಂಜದ ಚಿನ್ನಪ್ಪ, ಪೆರಾಬೆ ಗ್ರಾಮದ ಮನವಳಿಕೆ ಅಂಗನವಾಡಿ ಕಾರ್ಯಕರ್ತೆ ಮೋಹಿನಿ, ಮೂಡುಶೆಡ್ಡು ಗ್ರಾಮದ ಮಹಮ್ಮದ್ ಅವರು ಅಕ್ಷರ ಅಭಿಪ್ರಾಯ ವ್ಯಕ್ತಪಡಿಸಿದರು.


ಮಾದರಿ ಗ್ರಾಮಾಭಿವೃದ್ಧಿ ಆಂದೋಲನ ಮತ್ತು ಮಾದರಿ ಗ್ರಾಮ ವಿಕಾಸ ಕೇಂದ್ರಗಳ ಪುನಶ್ಚೇತನಕ್ಕೆ ಚಾಲನೆಯನ್ನು ನೀಡಲಾಯಿತು. ನವಸಾಕ್ಷರರಾದ ಸುಲೋಚನಾ ಅವರ ಮಗಳು ಭಾಗ್ಯಲಕ್ಷಿö್ಮ ಅವರ ವಿದ್ಯಾಭ್ಯಾಸಕ್ಕೆ ರೂ. ೬,೫೦೦ ಸಭೆಯಲ್ಲಿ ವಿದ್ಯಾನಿಧಿ ಸಂಗ್ರಹವನ್ನು ಮಾಡಲಾಯಿತು. ಇದೇ ಸಂದರ್ಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಮಲ್ಲೇಶಯ್ಯ ಅವರು ಬರೆದ ‘ಮಕ್ಕಳ ನಾಟಕಗಳು’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.


ವೇದಿಕೆಯಲ್ಲಿ ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಕಡಬ ತಾಲೂಕು ಪಂಚಾಯತ್‌ನ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ, ಪುತ್ತೂರು ತಾಲೂಕು ಸಂಪನ್ಮೂಲ ಸಂಯೋಜಕ ನವೀನ್ ವೇಗಸ್, ಕಡಬ ಸೈಂಟ್ ಜೋಕಿಮ್ಸ್ ಪ್ರೌಢ ಶಾಲಾ ಮುಖ್ಯಗುರು ಅಮಿತ್ ಪ್ರಕಾಶ್ ರೋಡ್ರಿಗಸ್, ಡಯಟ್ ಮಂಗಳೂರು ಇದರ ಹಿರಿಯ ಉಪನ್ಯಾಸಕಿ ಮಂಜುಳಾ ಕೆ., ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಸಹಾಯಕಿ ಭಾಗೀರಥಿ ರೈ, ಕಡಬ ತಾಲೂಕು ಪಂ. ವ್ಯವಸ್ಥಾಪಕರಾದ ಆನಂದ ಗೌಡ ಉಪಸ್ಥಿತರಿದ್ದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯದರ್ಶಿ ಲೋಕೇಶ್ ಸಿ. ಸ್ವಾಗತಿಸಿದರು, ಕಡಬ ತಾ.ಪಂ. ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಭರತ್‌ರಾಜ್ ಕೆ. ವಂದಿಸಿದರು. ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕಿ ಭಾಗೀರಥಿ ರೈ ಕಾರ್ಯಕ್ರಮ ನಿರ್ವಹಿಸಿದರು.

URO HEALTH PLUS

Related Posts

Leave a Reply

Your email address will not be published.