ಭಜನೆ ಮತ್ತು ಭಜಕರ ಬಗ್ಗೆ ನಿಂದನಾ ಪೋಸ್ಟ್ ವಿಚಾರ : ಸಂಜೀವ ಪೂಜಾರಿಯನ್ನು ಬಂಧಿಸದಿದ್ದರೆ ಬೀದಿಗಿಳಿದು ಹೋರಾಟ

ಕಡಬ: ಭಜನೆ ಮತ್ತು ಭಜಕರ ಹಾಗು ಹಿಂದೂ ಧರ್ಮದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಪೋಸ್ಟ್ಗಳನ್ನು ಹಾಕುತ್ತಿರುವ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲಾದರೂ ಆವರನ್ನು ಇನ್ನೂ ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷದ್ ಭಜರಂಗದಳ ಕಡಬ ಪ್ರಖಂಡ ನೇತೃತ್ವದಲ್ಲಿ ಕಡಬ ಠಾಣಾ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ, ಹಿಂದೂ ದರ್ಮದ ಬಗ್ಗೆ ಅವಹೇಳನಕಾರಿ ಪೆÇಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಸರ್ಕಾರಿ ನೌಕರ ಸಂಜೀವ ಪೂಜಾರಿ ವಿರುದ್ದ ಇಲಾಖೆ ಈಗಾಗಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ ಈಡೆರಿಲ್ಲ. ಜೊತೆಗೆ ಈತನ ವಿರುದ್ದ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಾದರೂ ಇನ್ನೂ ಬಂಧಿಸಿಲ್ಲ. ಹೀಗಾಗಿ ಬೀದಿಗಿಳಿದು ಹೋರಾಟ ಅನಿವಾರ್ಯವಾಗಿದೆ ಎಂದರು. ವಿಹಿಂಪ ಜಿಲ್ಲಾ ಗೋರಕ್ಷಾ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಂ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಸಂಜೀವ ಪೂಜಾರಿಯವರನ್ನು ಸೋಮವಾರದೊಳಗೆ ಬಂಧಿಸದಿದ್ದಲ್ಲಿ ಮಂಗಳವಾರ ಜಿಲ್ಲಾ ಅರಣ್ಯಾಧಿಕಾರಿಯವರ ಕಛೇರಿಯ ಎದುರು ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

ಮಾತೃಶಕ್ತಿ ಜಿಲ್ಲಾ ಸಹಪ್ರಮುಖ್ ಗೀತಾ ಕೇವಳ, ಬಜರಂಗದಳ ಕಡಬ ತಾಲೂಕು ಸಂಯೋಜಕ ಮನೋಜ್ ಖಂಡಿಗ, ವಿಹಿಂಪ ಕಡಬ ತಾಲೂಕು ಗೋರಕ್ಷಾ ಪ್ರಮುಖ್ ಜಯಂತ ಕಲ್ಲುಗುಡ್ಡೆ, ಕಡಬ ತಾಲೂಕು ಮಾತೃ ಶಕ್ತಿ ಪ್ರಮುಖ್ ಪ್ರಮಿಳಾ ಲೋಕೇಶ್, ಕಡಬ ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷೆ ನಂದ, ನೂಜಿಬಾಳ್ತಿಲ ಗ್ರಾ.ಪಂ ಸದಸ್ಯ ಚಂದ್ರಶೇಖರ ಹಳೆನೂಜಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.