ಕಡಬ : ಮನೆಯಿಂದ ಚಿನ್ನಾಭರಣ ಹಾಗೂ ನಗದು ಕಳ್ಳತನ

ಕಡಬ ತಾಲೂಕಿನ ಗೋಳಿ ತೊಟ್ಟು ಗ್ರಾಮದ ಆರಂತಬೈಲು ಎಂಬಲ್ಲಿ ನಿನ್ನೆ ತಡರಾತ್ರಿ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಗೆ ನುಗ್ಗಿದ ಕಳ್ಳರು 105 ಗ್ರಾಂ ಚಿನ್ನ ಹಾಗೂ 8 ಸಾವಿರ ರೂ ನಗದು ಸೇರಿ ಒಟ್ಟು 5.30 ಲಕ್ಷ ಮೌಲ್ಯದ ವಸ್ತುವನ್ನು ದೋಚಿ ಪರಾರಿಯಾಗಿದ್ದಾರೆ.
ಮನೆಯ ಮಾಲೀಕ ರಮ್ಲತ್ ಹಾಗೂ ಅವರ ಪತ್ನಿ ಖತೀಜಮ್ಮ ರವರು ದುಬೈಯಿಂದ ಬರುವ ತಮ್ಮ ಪುತ್ರನನ್ನು ಕರೆ ತರಲು ನಿನ್ನೆ ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ವಾಪಸ್ ತಡರಾತ್ರಿ ಮನೆಗೆ ಬಂದ ವೇಳೆ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಡಾ. ವೀರಯ್ಯ ಹಿರೇಮಠ ಹಾಗೂ ಇನ್ಸ್ ಪೆಕ್ಟರ್ ರವಿ ಪಿ ಎಸ್, ಸಬ್ ಇನ್ಸ್ ಪೆ ಕ್ಟರ್ ರಾಜೇಶ್ ಹಾಗೂ ನೆಲ್ಯಾಡಿ ಹೂರಠಾಣೆಯ ಬಾಲಕೃಷ್ಣ, ಕುಶಾಲಪ್ಪ ಮತ್ತು ಪ್ರತಾಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೆರಳಚ್ಚು ತಜ್ಞರು, ಶ್ವಾನದಳ ತಂಡದ ಅಧಿಕಾರಿಗಳು ಕೂಡ ಬೇಟೆ ನೀಡಿ ಪರಿಶೀಲಿಸಿದರು
