ನಗರದ ಕದ್ರಿ ಫ್ಲ್ಯಾಟ್‍ನಲ್ಲಿ ಬೆಂಕಿ ಅವಘಡ

ಮಂಗಳೂರು: ಫ್ಲ್ಯಾಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಗರದ ಜೈಲ್ ರಸ್ತೆ-ಕದ್ರಿ ಕಂಬಳದ ವಸತಿ ಸಮುಚ್ಚಯದ 2ನೆ ಅಂತಸ್ತಿನ ಫ್ಲ್ಯಾಟ್‍ನಲ್ಲಿ ನಡೆದಿದೆ. ಏಕಾಏಕಿ ಬೆಡ್‍ರೂಮ್‍ನಲ್ಲಿ ಹೊಗೆ ಕಾಣಿಸಿತು.

ಮಾಹಿತಿ ಪಡೆದ ಪಾಂಡೇಶ್ವರ ಮತ್ತು ಕದ್ರಿಯ ಅಗ್ನಿಶಾಮ ದಳದ ಸಿಬ್ಬಂದಿ ವರ್ಗ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿತು. ಫ್ಲ್ಯಾಟ್‍ನ ನಿವಾಸಿಗಳು ಅಪಾಯದಿಂದ ಪಾರಾಗಿದ್ದು, ಹಾಸಿಗೆ ಮತ್ತಿತರ ಪರಿಕರಗಳು ಬೆಂಕಿಗೆ ಆಹುತಿಯಾಗಿದೆ. ಇಸ್ತ್ರಿಪೆಟ್ಟಿಗೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
