ಕದ್ರಿ ರಸ್ತೆಯಲ್ಲೆ ಹರಿಯುತ್ತಿರುವ ಕೊಳಚೆ ನೀರು
ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮುತ್ತಿರುವ ಮಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಸ್ವಚ್ಚತೆಗೆ ಗಮನಹರಿಸದಿರುವುದು ವಿಷಾದನೀಯ ಸಂಗತಿ, ನಗರದ ಕದ್ರಿ ಮಲ್ಲಿಕಟ್ಟೆ ಸಮೀಪದ ವಾರ್ಡ್ ನಂಬರ್ 33ರ ಜುಗುಲ್ ಹಾಲ್ ಹಿಂಬದಿಯ ರಸ್ತೆಯಲ್ಲಿ ಮನೆಗಳ ಮುಂದೆ ಕಳೆದ ಮೂರು ದಿನಗಳಿಂದ ಚರಂಡಿ ತುಂಬಿ ಹರಿಯುತ್ತಿದೆ, ಸಮಸ್ಯೆ ಬಗೆಹರಿಸುವುದಾಗಿ ನಗರಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಆದರೆ ಇನ್ನು ಕೂಡ ಭರವಸೆ ಈಡೆರಿಲ್ಲ,
ಸ್ಥಳಿಯ ನಿವಾಸಿಗಳು ಪ್ರತಿದಿನವೂ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ, ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಅಲ್ಲಿನ ಸ್ಥಳಿಯರು ಸ್ಥಳಿಯಾಡಳಿತಕ್ಕೆ ವಿ4 ಚಾನಲ್ ನ ಮೂಲಕ ಮನವಿಯನ್ನು ಮಾಡಿದ್ದಾರೆ