ಮಹಾಕಾಳಿ ದೇವಿ ಅಪಮಾನಗೈದ ನಿರ್ದೇಶಕಿಯನ್ನು ಬಂಧಿಸಿ : ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ

ಉಳ್ಳಾಲ: ದೇವಿ ಮಹಾಂಕಾಳಿಯನ್ನು ಅವಹೇಳನಕಾರಿಯಾಗಿ , ಹಿಂದೂಗಳ ಧಾರ್ಮಿಕ ಭಾವನಗಳಿಗೆ ಧಕ್ಕೆ ತರುವ ರೂಪದಲ್ಲಿ ಚಿತ್ರಿಸಿರುವ ಡಾಕ್ಯುಮೆಂಟರಿ ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಸರಕಾರ ಶೀಘ್ರವೇ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಒತ್ತಾಯಿಸಿದ್ದಾರೆ.

ದುಷ್ಟರನ್ನು ಸಂಹರಿಸುವ ದೇವಿ ಮಹಾಕಾಳಿ. ಹಿಂದೂಗಳು ಬಹಳಷ್ಟು ನಂಬುವ ದೇವಿಗೆ ಅವಹೇಳ ನಡೆಸಿರುವುದು ಸಮಸ್ತ ಹಿಂದೂ ಸಮಾಜಕ್ಕೆ ಮಾಡಿರುವ ಅಪಮಾನ. ಯಾರಿಗೂ ಇನ್ನೊಂದು ಧರ್ಮದ ವಿಚಾರಗಳನ್ನು ಅವಹೇಳನಗೈಯ್ಯುವ ಹಕ್ಕಿಲ್ಲ. ಶೀಘ್ರವೇ ತಪ್ಪಿತಸ್ಥ ನಿರ್ದೇಶಕಿ ವಿರುದ್ಧ ಕಾನೂನು ಕ್ರಮಕೈಗೊಂಡು ಬಂಧಿಸಬೇಕಾಗಿದೆ ಎಂದಿದ್ದಾರೆ.

Related Posts

Leave a Reply

Your email address will not be published.