ಕಂಕನಾಡಿ ನಗರ ಠಾಣೆ : ಇಬ್ಬರು ರೌಡಿಗಳ ಮೇಲೆ ಗೂಂಡಾ ಕಾಯ್ದೆ
ಕಂಕನಾಡಿ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಇಬ್ಬರು ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ.ಪಡೀಲ್ ಜಲ್ಲಿಗುಡ್ಡೆ ನಿವಾಸಿ ಪ್ರೀತಂ ಪೂಜಾರಿ (26) ಮತ್ತು ಪಡೀಲ್ ಅಳಪೆ ನಿವಾಸಿ ಧೀರಜ್ (27) ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ. ಪ್ರೀತಂ ಪೂಜಾರಿ ವಿರುದ್ಧ ಕಂಕನಾಡಿ ನಗರ, ಗ್ರಾಮಾಂತರ, ಕದ್ರಿ, ಬಂದರು ಠಾಣೆಗಳಲ್ಲಿ ಕೊಲೆ ಯತ್ನ, ಕೊಲೆ ಬೆದರಿಕೆ, ಹಲ್ಲೆ, ದರೋಡೆ, ಗಾಂಜಾ ಸೇವನೆ ಸೇರಿ 12 ಪ್ರಕರಣಗಳಿವೆ. ಧೀರಜ್ ವಿರುದ್ಧ ಕಂಕನಾಡಿ ಗ್ರಾಮಾಂತರ, ನಗರ, ಪಾಂಡೇಶ್ವರ ಠಾಣೆಯಲ್ಲಿ ಕೊಲೆಯತ್ನ, ದರೋಡೆ ಸಂಚು ಸೇರಿ ಒಂಬತ್ತು ಕೇಸುಗಳಿವೆ.
ಇವರಿಬ್ಬರೂ ಮಂಗಳೂರು ಬೈಕಿನಲ್ಲಿದ್ದು ಹೊರಬಂದರೆ ಮತ್ತೆ ಅಪರಾಧ ಕೃತ್ಯದಲ್ಲಿ ತೊಡಗುವುದರಿಂದ ಸುದೀರ್ಘ ಅವಧಿಗೆ ಜೈಲಿನಲ್ಲಿಡಲು ಗೂಂಡಾ ಕಾಯ್ದೆ ಹೇರುವಂತೆ ಕಂಕನಾಡಿ ನಗರ ಠಾಣಾಧಿಕಾರಿ ಎಸ್.ಎಚ್. ಭಜಂತ್ರಿ, ಪೆÇಲೀಸ್ ಕಮಿಷನರ್ ಅವರನ್ನು ಕೋರಿದ್ದಾರೆ. ಇಬ್ಬರ ವಿರುದ್ಧವೂ ಮಂಗಳೂರು ನಗರ ಪೆÇಲೀಸ್ ಕಮಿಷನರ್ ಶಶಿಕುಮಾರ್ ಗೂಂಡಾ ಕಾಯ್ದೆ ಜಾರಿಗೊಳಿಸಿದ್ದಾರೆ.